ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಉಡುಪಿ ಪರ್ಯಾಯ ಮಹೋತ್ಸವಕ್ಕೆ ಹೊರೆಕಾಣಿಕೆ ಸಂಗ್ರಹ ಕೇಂದ್ರ ಉದ್ಘಾಟನೆ

ಕಟೀಲು: ಉಡುಪಿಯಲ್ಲಿ ನಡೆಯುವ ಪರ್ಯಾಯ ಮಹೋತ್ಸವಕ್ಕೆ ಕಟೀಲು ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು ಪೂರ್ವಾಭಾವಿಯಾಗಿ ಕಟೀಲಿನಲ್ಲಿ ಆರಂಭಗೊಂಡ ಹೊರೆ ಕಾಣಿಕೆ ಸಂಗ್ರಹ ಕೇಂದ್ರದ ಉದ್ಘಾಟನೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ , ಆಡಳಿತ ಮಂಡಳಿಯ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ನೆರವೇರಿಸಿದರು.

ಈ ಸಂದರ್ಭ ದೇವಳದ ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ , ಅನಂತ ಪದ್ಮನಾಭ ಆಸ್ರಣ್ಣ , ಶ್ರೀ ಹರಿನಾರಾಯಣ ದಾಸ ಆಸ್ರಣ್ಣ , ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಡಾ| ಪದ್ಮನಾಭ ಭಟ್ ಎಕ್ಕಾರು. ಈಶ್ವರ್ ಕಟೀಲು, ರಾಘವೇಂದ್ರ ಆಚಾರ್ಯ ಬಜಪೆ , ಸುಪ್ರೀತ್ ಶೆಟ್ಟಿ , ಕೊಡೆತ್ತೂರು ಜಯರಾಮ ಮುಕ್ಕಾಲ್ದಿ , ಅಭಿಲಾಷ್ ಶೆಟ್ಟಿ , ದೊಡ್ಡಯ್ಯ ಮೂಲ್ಯ ಕಟೀಲು ಮತ್ತಿತತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/01/2022 02:22 pm

Cinque Terre

2.43 K

Cinque Terre

0

ಸಂಬಂಧಿತ ಸುದ್ದಿ