ಬಜಪೆ: ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನ(ದೇರಿಂಜಗಿರಿ)ಯಲ್ಲಿ ಜ. 14 ರಿಂದ ವರ್ಷಾವಧಿ ಜಾತ್ರೆ ನಡೆಯಲಿದ್ದು, ಪೂರ್ವಭಾವಿಯಾಗಿ ಸಂಪ್ರದಾಯದಂತೆ ಕೋರಿಗುಂಟ ('ಪಾಲೆ ಮುಹೂರ್ತ' ಜಾತ್ರೆಗೆ ದಿನ ನಿಶ್ಚಯ ಮಾಡುವುದು ) ಎಕ್ಕಾರು ಶಿಬರೂರಿಗೆ ದೈವಗಳು ಆಗಮಿಸಿ ನೆಲೆಗೊಳ್ಳುವ ಮೊದಲು ಪ್ರಥಮವಾಗಿ ನೆಲೆಯಾದ ನಡಿಬೆಟ್ಟು ( ನಡ್ಯೋಡಿಕರೆ) ಬೊಲ್ಲಿ ಅಶ್ವತ್ಥ ಮರದ ಜಾಗದಲ್ಲಿ ಸೋಮವಾರ ನಡೆಯಿತು.
ಜಾತ್ರೆಗೆ ದಿನ ನಿಗದಿಯಾದ ದಿನದಿಂದ ಜಾತ್ರೆ ಸಂಪನ್ನಗೊಳ್ಳುವ ತನಕ ಗ್ರಾಮದಲ್ಲಿ ಯಕ್ಷಗಾನ , ಮದುವೆ , ಅಂತ್ಯಕ್ರಿಯೆ , ಉತ್ತರಕ್ರಿಯೆ ಇನ್ನಿತರ ಕಾರ್ಯಕ್ರಮ ನಡೆಸುವಂತಿಲ್ಲ.
ಈ ಸಂದರ್ಭ ಎಕ್ಕಾರು ಗೋಪಾಲಕೃಷ್ಣ ಮಠದ ವೇದಮೂರ್ತಿ ಶ್ರೀ ಹರಿದಾಸ ಉಡುಪ, ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವ), ಭಾಸ್ಕರ ಮುದ್ದ ನಡ್ಯೋಡಿಗುತ್ತು, ಗೋಪಾಲಶೆಟ್ಟಿ ಬಡಕರೆ ಬಾಳಿಕೆ, ರಮೇಶ್ ಭಂಡಾರಿ ಮಿತ್ತೊಟ್ಟು ಬಾಳಿಕೆ ಮೇಲೆಕ್ಕಾರು, ದೈವಸ್ಥಾನ ಅರ್ಚಕ ಸದಾನಂದ ಮೊಯಿಲಿ, ದೈವ ನರ್ತಕ ಉಮೇಶ್ ಪಂಬದ, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
04/01/2022 11:03 am