ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾಶಿ, ಮಥುರಾ ದೇಗುಲಗಳ ವಿವಾದ ಸರಕಾರವೇ ಬಗೆಹರಿಸಲು 'ಚಲೋ ಹಿಂದೂ ರಾಷ್ಟ್ರ ಯಾತ್ರೆ'

ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿಯಲ್ಲಿಯೇ ಕಾಶಿ, ಮಥುರಾ ದೇಗುಲಗಳ ವಿವಾದವನ್ನು ಸರಕಾರವೇ ಮುಂದೆ ನಿಂತು ಬಗೆಹರಿಸಬೇಕೆಂದು ಆಗ್ರಹಿಸಿ ಮಾರ್ಚ್ ನಲ್ಲಿ ಕರ್ನಾಟಕದಿಂದ ಕನ್ಯಾಕುಮಾರಿವರೆಗೆ 'ಚಲೋ ಹಿಂದೂ ರಾಷ್ಟ್ರ ಯಾತ್ರೆ' ನಡೆಸಲಾಗುತ್ತದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ದಕ್ಷಿಣ ಭಾರತ ವಲಯ ಕಾರ್ಯದರ್ಶಿ ಶ್ರೀಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪನಾಥ್ ಹೇಳಿದರು.

ನಗರದ ಆರ್ಯ ಸಮಾಜದಲ್ಲಿ ಮಾತನಾಡಿದ ಅವರು,ರಾಷ್ಟ್ರದ ನೂತನ ಸಂಸತ್ ಭವನಕ್ಕೆ 'ಹಿಂದೂ ರಾಷ್ಟ್ರ ಭವನ' ಎಂದು ಹೆಸರಿಡಲು ಒತ್ತಾಯಿಸಿ ಸಹಿ ಸಂಗ್ರಹಕ್ಕೆ ನಾಳೆ ಚಿಕ್ಕಮಗಳೂರಿನಲ್ಲಿ ಚಾಲನೆ ದೊರಕಲಿದೆ ಎಂದು ಹೇಳಿದರು.

ಪ್ರೊ. ಭಗವಾನ್ ಅವರಿಗೆ ಮಸಿ ಬಳಿದಿರುವ ವಕೀಲೆ ಮೀರಾ ರಾಘವೇಂದ್ರ ಅವರನ್ನು ಅಖಿಲ ಭಾರತ ಹಿಂದೂ ಮಹಾಸಭಾ ಅಭಿನಂದಿಸುತ್ತದೆ. ಅವರನ್ನು ನಾವು ಬೆಂಬಲಿಸಲಿದ್ದು, ಅವರ ಮೇಲಿನ ಹಲಸೂರು ಠಾಣೆಯಲ್ಲಿನ ಪ್ರಕರಣವನ್ನು ಸರಕಾರ ಆದೇಶ ನೀಡಿ ಹಿಂಪಡೆಯಬೇಕು. ಎಲ್ಲ ಮಸೀದಿಗಳಲ್ಲಿ ಅಳವಡಿಸಿರುವ ಮೈಕ್ ಗಳನ್ನು ನಿಷೇಧಿಸಬೇಕೆಂದು‌ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನೀಡಿರುವ ಆದೇಶ ಪಾಲಿಸಬೇಕೆಂದು ಈಗಾಗಲೇ ಕೇರಳ ಸರಕಾರಕ್ಕೆ ಆದೇಶ ನೀಡಿದ್ದೇವೆ. ಅದೇ ರೀತಿ ಕರ್ನಾಟಕ ಸರಕಾರ ಕೂಡ ಇದೇ ಆದೇಶ ಪಾಲಿಸಲಿ ಎಂದು ಶ್ರೀಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪನಾಥ್ ಹೇಳಿದರು.

Edited By : Vijay Kumar
Kshetra Samachara

Kshetra Samachara

06/02/2021 09:39 pm

Cinque Terre

2.22 K

Cinque Terre

2

ಸಂಬಂಧಿತ ಸುದ್ದಿ