ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : ಕಟೀಲು ಬ್ರಹ್ಮಕಲಶಕ್ಕೆ ಒಂದು ವರ್ಷದ ಸಂಭ್ರಮ

ಮುಲ್ಕಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವ ನಡೆದು ಶನಿವಾರ ಒಂದು ವರುಷ ಆದ ಹಿನ್ನಲೆಯಲ್ಲಿ ದಿನವಿಡೀ ವಿವಿಧ ತಂಡಗಳಿಂದ ಭಜನೆ ನಡೆಯಿತು.

ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕೃಷ್ಣ ಪೈ, ಯತೀಶ್ ಶೆಟ್ಟಿ, ಜ್ಯೋತಿ ಉಡುಪ, ಸುರೇಶ್ ನಾಯಕ್, ಮೋಹನದಾಸ್ ಮುಂತಾದವರ ಉಪಸ್ಥಿತಿಯಲ್ಲಿ ಭಜನೆಗೆ ಚಾಲನೆ ನೀಡಲಾಯಿತು.

ರಾತ್ರಿ ಶ್ರೀ ದೇವರಿಗೆ ರಂಗಪೂಜೆ ನಡೆಯಿತು. ಕಳೆದ ವರುಷ ಕಟೀಲು ಆರೂ ಮೇಳಗಳ ಕಲಾವಿದರಿಂದ ಒಂದೇ ವೇದಿಕೆಯಲ್ಲಿ ಯಕ್ಷಗಾನ ನಡೆದಿತ್ತು. ಈ ಬಾರಿ ದೇವಿಗೆ ಪ್ರಿಯವಾದ ಯಕ್ಷಗಾನ ಬಯಲಾಟವನ್ನು ಪದ್ಮನಾಭ ಕಟೀಲು ಸೇವಾರೂಪವಾಗಿ ಆಯೋಜಿಸಿದ್ದು, ವಿಶೇಷ ಪ್ರಾರ್ಥನೆಯೊಂದಿಗೆ ಯಕ್ಷಗಾನ ಪ್ರದರ್ಶನಗೊಂಡಿತು. ದೇಗುಲದಲ್ಲಿ ಮೂರೂ ಹೊತ್ತೂ ಅನ್ನಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರು, ಬ್ರಹಕಲಶೋತ್ಸವದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

31/01/2021 08:13 am

Cinque Terre

2.7 K

Cinque Terre

0

ಸಂಬಂಧಿತ ಸುದ್ದಿ