ಮುಲ್ಕಿ: ಸಾಮಾಜಿಕ ಹಾಗೂ ಅನೇಕ ಮಾನವೀಯತೆಯ ಸೇವಾ ಕೈಂಕರ್ಯ ನಡೆಸಿ ಬಡವರಿಗೆ ಸಹಾಯಹಸ್ತ ನೀಡುತ್ತಿರುವ ಬಿರುವೆರ್ ಕುಡ್ಲ ಮುಲ್ಕಿ ಘಟಕ ಉದ್ಘಾಟನೆ ಗೊಂಡು ಇಂದಿಗೆ 3 ವರ್ಷ ವಾಗಿದ್ದು, ಈ ಪ್ರಯುಕ್ತ ಮುಲ್ಕಿ ಬಿಲ್ಲವ ಸಂಘದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುವರ್ಯ ರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್, ಕೋಶಾಧಿಕಾರಿ ಪ್ರಕಾಶ್ ಸುವರ್ಣ, ಘಟಕಾಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಅಶೋಕ್ ಸುವರ್ಣ, ಉಮೇಶ್ ಮಾನಂಪಾಡಿ, ರಿತೇಶ್ ಅಂಚನ್, ಕಿಶೋರ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/01/2021 10:52 pm