ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಮಂತೂರು: "ಭಜನೆಯಿಂದ ಜ್ಞಾನ ವೃದ್ಧಿ, ಲೋಕ ಕಲ್ಯಾಣ ಸಾಧ್ಯ"

ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಶ್ರೀ ಅದಿಜನಾರ್ದನ ಸೇವಾ ಭಜನಾ ಮಂಡಳಿಯ ವಾರ್ಷಿಕ ಭಜನೆ ಮಂಗಲೋತ್ಸವ ಗುರುವಾರ ಮಕರ ಸಂಕ್ರಾಂತಿ ಪುಣ್ಯದಿನದಂದು ಜರುಗಿತು.

ಕಾರ್ಯಕ್ರಮಕ್ಕೆ ಶ್ರೀ ಮತ್ತು ಶ್ರೀಮತಿ ರುಕ್ಮಿಣಿ ಕುಟ್ಟಿ ಶೆಟ್ಟಿ ದಂಪತಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ಸಂದರ್ಭ ವೇದಮೂರ್ತಿ ವಿಷ್ಣುಮೂರ್ತಿ ಭಟ್ ಮಾತನಾಡಿ, ಭಜನೆಯ ಮುಖಾಂತರ ಜ್ಞಾನ ವೃದ್ಧಿ, ಲೋಕಕಲ್ಯಾಣ ಸಾಧ್ಯ. ದೇವರ ಆರಾಧನೆಯಿಂದ ಜಗತ್ತಿನಲ್ಲಿ ಕೊರೊನಾ ದೂರವಾಗಿ ಶಾಂತಿ, ಆರೋಗ್ಯ ನೆಲೆಸಲಿ ಎಂದರು.

ಅರ್ಚಕ ಪುರುಷೋತ್ತಮ್ ಭಟ್, ಅತಿಕಾರಿಬೆಟ್ಟು ಗ್ರಾಪಂ ಸದಸ್ಯೆ ಪದ್ಮಿನಿ ಶೆಟ್ಟಿ, ಮುಲ್ಕಿ ಠಾಣೆ ಎಎಸ್ಐ ಚಂದ್ರಶೇಖರ್, ಶಂಕರ್ ಮಾಸ್ಟರ್ ಹಾಗೂ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಊರಿನ ಹಿರಿಯರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

14/01/2021 12:00 pm

Cinque Terre

2.67 K

Cinque Terre

0

ಸಂಬಂಧಿತ ಸುದ್ದಿ