ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಕ್ರಿಸ್ಮಸ್ ಗೋದಲಿ ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ

ಮುಲ್ಕಿ: ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರ್ ವತಿಯಿಂದ ಕ್ರಿಸ್ಮಸ್ ಪ್ರಯುಕ್ತ ನಡೆದ ಗೋದಲಿ ತಯಾರಿ ಸ್ಪರ್ಧೆಯ ಬಹುಮಾನ ವಿತರಣೆ ಕಟೀಲು ಸಂತ ಜಾಕೋಬರ ದೇವಾಲಯದಲ್ಲಿ ಜರುಗಿತು. ಜೆಪ್ಪು ಸೆಮಿನರಿಯ ಪ್ರಾಧ್ಯಾಪಕರಾದ ಧರ್ಮಗುರು ವಂ. ಮ್ಯಾಕ್ಸಿಮ್ ಮುಖ್ಯ ಅತಿಥಿಯಾಗಿ ಮಾತನಾಡಿ, ಲಯನ್ಸ್ ಕ್ಲಬ್ ಸಮಾಜ ಸೇವೆಗೆ ಹೆಚ್ಚು ಮಹತ್ವ ಕೊಡುತ್ತಿದ್ದು, ಕಟೀಲ್ ಎಕ್ಕಾರ್ ಲಯನ್ಸ್ ಸೇವಾ ಸಂಸ್ಥೆ ಕಟೀಲಿನ ಆಸುಪಾಸಿನಲ್ಲಿ ಬಹಳಷ್ಟು ಜನಮೆಚ್ಚುವಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕಟೀಲು ಚರ್ಚ್ ಧರ್ಮಗುರು ವಂ. ಮೈಕಲ್ ಮಸ್ಕರೇನಸ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಶಾಂತಿ ಸಲ್ದಾನ, ಕಾರ್ಯದರ್ಶಿ ನವೀನ್ ತಾವ್ರೊ, ಅಲೆಕ್ಸ್ ತಾವ್ರೊ, ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಮತ್ತಿತರರು ಹಾಜರಿದ್ದರು. ಬಳಿಕ ಸ್ಪರ್ಧೆ ವಿಜೇತರಿಗೆ

ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ವಿತರಿಸಲಾಯಿತು.

Edited By : Nagaraj Tulugeri
Kshetra Samachara

Kshetra Samachara

01/01/2021 07:32 pm

Cinque Terre

4.04 K

Cinque Terre

0

ಸಂಬಂಧಿತ ಸುದ್ದಿ