ಮಂಗಳೂರು: ದ. ಕ. ಸುನ್ನಿ ಸೆಂಟರ್ (ರಿ) ಡೆವಲಪ್ಮೆಂಟ್ ಕಮಿಟಿಯ ನೂತನ ಕೃಷ್ಣಾಪುರ ಶಾಖೆ ಉದ್ಘಾಟನೆ ನಡೆಯಿತು.
ಕಾರ್ಯಕ್ರಮದಲ್ಲಿ ಡಿ ಕೆ ಎಸ್ ಸಿ ಕೇಂದ್ರ ಸಮೀತಿ ಮತ್ತು ಮರ್ಕಝ್ ತಹ್ಲೀಮುಲ್ ಇಹ್ಸಾನ್ ಮೂಳೂರು ಇದರ ಅಧ್ಯಕ್ಷ ಅಸ್ಸಯ್ಯದ್ ಕುಂಬೋಳ್ ಆಟ ಕೋಯ ತಂಗಳ್ ದುವಾ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಕಝುತ್ತಹ್ಲೀಮುಲ್ ಮೂಳೂರ್ ನ ಕಾರ್ಯಾಧ್ಯಕ್ಷ ಅಸ್ಸಯ್ಯದ್ ಮುಕ್ತಾರ್ ತಂಗಳ್ ವಹಿಸಿದ್ದರು.
ಸಂಸ್ಥೆಯ ವ್ಯವಸ್ಥಾಪಕ ಮುಸ್ತಫ ಸಅದಿ ಪ್ರಾಸ್ತಾವಿಕ ಮಾತನಾಡಿದರು.
ಕೃಷ್ಣಾಪುರದ ನೂತನ ಸಮೀತಿ ರಚನೆ ಮುಕ್ತಾರ್ ತಂಗಳ್ ರವರ ಸಮ್ಮುಖದಲ್ಲಿ ಮಂಗಳೂರು ಉತ್ತರ ಶಾಸಕ ಮೊಯಿದಿನ್ ಬಾವಾ ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ 5ನೇ ವಾರ್ಡ್ ಕಾರ್ಪೊರೇಟರ್ ಅಬೂಬಕ್ಕರ್ ಕುಳಾಯಿ, ಡೆವಲಪ್ಮೆಂಟ್ ಕಮಿಟಿ ಅಧ್ಯಕ್ಷರಾದ ಹುಸೈನಾಜಿ ಕೀನ್ಯಾ, ಕೇಂದ್ರ ಜುಮಾ ಮಸೀದಿ ಖತೀಬರಾದ ಫಾರೂಕ್ ಸಖಾಫಿ, ಬದ್ರುಲ್ ಹುದಾ ಖತೀಬ್ ಅಶ್ರಫ್ ಸಖಾಫಿ,ಕೇಂದ್ರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಹಾಜಿ ಕೀನ್ಯಾ, ಡಿ ಕೆ ಎಸ್ ಸಿ ಎಜುಪ್ಲಾನೆಟ್ ಪ್ರಿನ್ಸಿಪಾಲ್ ಸ್ವಾಬಿರ್ ಉಸ್ತಾದ್, ಕೇಂದ್ರ ಜುಮಾ ಮಸೀದಿ 7th ಬ್ಲಾಕ್ ಕೃಷ್ಣಾಪುರ ಇದರ ಅಧ್ಯಕ್ಷರಾದ ಜಲೀಲ್ ಬದ್ರಿಯಾ, ಹಾಗೂ ಕೇಂದ್ರ, ರಾಷ್ಟ್ರೀಯ, ವಲಯ, ಘಟಕಗಳ ಸದಸ್ಯರು ಡೆವಲಪ್ಮೆಂಟ್ ಕಮಿಟಿಯ ಸರ್ವ ಸದಸ್ಯರು ಭಾಗವಹಿಸಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಇಬ್ರಾಹಿಂ ಬೈಕಂಪಾಡಿ , ಹನೀಫ್ ಕುಪ್ಪೆಪದವು ಪ್ರದಾನ ಕಾರ್ಯದರ್ಶಿ, ಅಬ್ದುಲ್ ಖಾದರ್ ವೆಲ್ಕಮ್ ಕೋಶಾಧಿಕಾರಿಯಾಗಿ ಆಯ್ಕೆಯಾದರು.
ಇದೇ ಸಂದರ್ಭ ಸಾಮಾಜಿ ಸೇವೆಯಲ್ಲಿ ಗೌರವ ಡಾಕ್ಟರೇಟ್ ಪಡೆದ ಮಾಜಿ ಶಾಸಕ ಮೊಯಿದಿನ್ ಬಾವಾ ಅವರನ್ನು ಸನ್ಮಾನಿಸಲಾಯಿತು.
Kshetra Samachara
16/12/2020 09:17 am