ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮ, ರಾಜಕೀಯ ಭ್ರಷ್ಟವಾಗಿದೆ: ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ವಿಷಾದ

ಬೆಳ್ತಂಗಡಿ: ನಮ್ಮ ಬದುಕಿನ ಮೇಲೆ ಅತ್ಯಂತ ಹೆಚ್ಚು ಪರಿಣಾಮ ಬೀರುವ ಧರ್ಮ ಮತ್ತು ರಾಜಕೀಯ ಇಂದಿನ ದಿನಗಳಲ್ಲಿ ಭ್ರಷ್ಟವಾಗಿದೆ ಎಂದು ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧರ್ಮ‌ ಮತ್ತು ರಾಜಕೀಯ ಕ್ಷೇತ್ರಗಳು ಭ್ರಷ್ಟವಾಗಿರುವ ಪರಿಣಾಮ ಜನರ ಮೇಲೆ ನೇರವಾಗಿಯೇ ಆಗುತ್ತಿದೆ. ಇದನ್ನು ಶುದ್ಧಗೊಳಿಸಿ ಆರೋಗ್ಯಕರ ಸಮಾಜ ನಿರ್ಮಾಣ ಕೇವಲ ಸಾಹಿತ್ಯದಿಂದ‌ಮಾತ್ರ ಸಾಧ್ಯ ಎಂದರು.

ಸಮ್ಮೇಳನವನ್ನು ವೇದಭೂಷಣ ಡಾ.ಎಸ್.ರಂಗನಾಥ್ ಉದ್ಘಾಟಿಸಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಡಾ.ಜ್ಯೋತೀಶಂಕರ್ ಮೈಸೂರು, ಡಾ.ಪುಂಡಿಕಾಯಿ ಗಣಪತಿ ಭಟ್ ಮೂಡುಬಿದಿರೆ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಡಿ.ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

16/12/2020 09:14 am

Cinque Terre

2.56 K

Cinque Terre

0

ಸಂಬಂಧಿತ ಸುದ್ದಿ