ಮುಲ್ಕಿ:ಇಲ್ಲಿನ ಬಸ್ಸು ನಿಲ್ದಾಣದ ಬಳಿ ನಗದು ,ದಾಖಲೆ ಪತ್ರ, ಎಟಿಎಂ ಕಾರ್ಡ್, ಇದ್ದ ಪರ್ಸ್ ಉಲ್ಲಂಜೆ ಕೊರಗಜ್ಜ ಮಂತ್ರ ದೇವತೆ ಕ್ಷೇತ್ರದ ಸದಸ್ಯರಿಗೆ ಸಿಕ್ಕಿದ್ದು ಅದನ್ನು ಮುಲ್ಕಿ ಪೊಲೀಸ್ ಠಾಣೆ ಸಿಬ್ಬಂದಿ ವರ್ಗ ಅಧಿಕಾರಿ ವರ್ಗದ ಸಮ್ಮುಖದಲ್ಲಿ ಠಾಣೆಗೆ ಹಸ್ತಾಂತರಿಸಲಾಯಿತು
ಪರ್ಸ ಹಾಗೂ ದಾಖಲೆ ಪತ್ರ ಮುಲ್ಕಿ ಠಾಣಾ ಸಿಬ್ಬಂದಿ ಚೆಲುವರಾಜ್ ಎಂಬುವರದಾಗಿದ್ದು ಮೈಸೂರಿಗೆ ಕರ್ತವ್ಯದ ನಿಮಿತ್ತ ತೆರಳುತ್ತಿರುವಾಗ ಕಳೆದು ಹೋಗಿತ್ತು ಎನ್ನಲಾಗಿದೆ.
ಕ್ಷೇತ್ರದ ಸಮಿತಿ ಸದಸ್ಯರಾದ ಪ್ರಕಾಶ್ಆಚಾರ್ಯ ಉಲ್ಲಂಜೆ ಕೌಶಿಕ್ ಉಲ್ಲಂಜೆ, ಸುಜಿತ್ ಕುಲಾಲ್ ಲಿಖಿತ್ ಪೂಜಾರಿ ಠಾಣೆಗೆ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಎಸ್ಐ ಮಾರುತಿ , ಎ.ಎಸ್ ಐ ಬಾಲಕೃಷ್ಣ ರೈ ಉಮೇಶ್, ಪವನ್ ಕೆರೆಕಾಡು ಉಪಸ್ಥಿತರಿದ್ದರು
Kshetra Samachara
11/10/2022 07:43 pm