ಮುಲ್ಕಿ:ಭಾರತೀಯ ಅಂಚೆ ಇಲಾಖೆ ಕಳೆದ 150 ಕ್ಕೂ ಹೆಚ್ಚು ವರ್ಷದಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತ ಬಂದಿದ್ದು ಹೊಸ ಹೊಸ ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಅಂಚೆ ಸೇವೆಗಳು ತಲುಪಲಿವೆ ಎಂದು ಮಂಗಳೂರು ವಿಭಾಗದ ಸಹಾಯಕ ಅಂಚೆ ಅದೀಕ್ಷಕ ಹರೀಶ್ ಹೇಳಿದರು.
ಕಿನ್ನಿಗೋಳಿ ಸಮೀಪದ ನಡುಗೋಡುನಲ್ಲಿ ಅಂಚೆ ಇಲಾಖೆಯ ಆಶ್ರಯದಲ್ಲಿ ನಡೆದ ಅಂಚೆ ಮಾಹಿತಿ ಕಾರ್ಯಗಾರದಲ್ಲಿ ಮಾಹಿತಿ ನೀಡಿ ಮಾತನಾಡಿ ಅಂಚೆ ಇಲಾಖೆಯು ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚು ಶಾಖೆಗಳನ್ನು ಹೊಂದಿದ್ದು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸುವ ಜೊತೆಗೆ , ಅಧಾರ್ ತಿದ್ದು ಪಡಿ ಮೊಬೈಲ್ ನಂಬರ್ ಜೋಡಣೆಯಂತಹ ಜನಪರ ಸೇವೆಗಳು ಅಂಚೆ ಇಲಾಖೆಯ ಮೂಲಕ ಜನರನ್ನು ತಲುಪುತ್ತಿದೆ. ಗ್ರಾಮೀಣ ಜನರಿಗೆ ವರದಾನ ವಾಗುವ ಗ್ರಾಮೀಣ ಅಂಚೆ ಜೀವ ವಿಮೆ ಹಾಗೂ ಹೆಣ್ಣು ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ವಿಮಾ ಯೋಜನೆಗಳು ಉತ್ತಮ ಕೆಲಸ ಮಾಡುತ್ತಿದ್ದು ಅಂಚೆ ನೌಕರರರು ಇನ್ನಷ್ಟು ಯೋಜನೆಗಳನ್ನು ಜನರಿಗೆ ತಲುಪಿಸಿ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ನಡುಗೋಡು ಗ್ರಾಮೀಣ ಅಂಚೆ ಕಚೇರಿಯ ಅಂಚೆ ಪಾಲಕಿ ಶಕುಂತಳ ಶೆಟ್ಟಿ , ಅಂಚೆ ಮೇಲ್ವಿಚಾರಕ ವಿನಯ್ , ಸಿಬಂದಿ ಶ್ರೀನಿವಾಸ ಉಡುಪ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ನಡುಗೋಡು ಶಾಖಾ ಅಂಚೆ ಬ್ಯಾಂಕಿಂಗ್ ಸೇವೆ , ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ, ಸುಖಾನ್ಯ ಸಮೃದ್ಧಿ ಯೋಜನೆ. ಪಿಪಿಎಫ್, ಐಪಿಬಿಪಿ, ಸಾಧನೆ ಮಾಡಿದ ನೆಲೆಯಲ್ಲಿ ಎಕ್ಕಾರು ಗ್ರಾಮೀಣ ಶಾಖಾ ಅಂಚೆ ಕಛೇರಿಯ ಅಂಚೆ ಪಾಲಕಿ ಶಕುಂತಳಾರನ್ನು ಗೌರವಿಸಲಾಯಿತು.
Kshetra Samachara
11/10/2022 06:17 pm