ಮಂಗಳೂರು:ಎಂ ಆರ್ ಪಿ ಎಲ್ 4ನೇ ಹಂತದ ಭೂಸ್ವಾಧೀನ ಸಂದರ್ಭ ನಿರ್ವಸಿತರಾಗುವ ಕುಟುಂಬಗಳಿಗೆ ಪ್ರಧಾನ ಆದ್ಯತೆಯನ್ನು ನೀಡಿ ನ್ಯಾಯೋಚಿತ ಪರಿಹಾರಗಳನ್ನು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ರವರಿಗೆ ನಾಲ್ಕನೇ ಹಂತದ ಎಂ ಆರ್ ಪಿ ಎಲ್ ಭೂ ನಿರ್ವಸಿತರ ಹಿತರಕ್ಷಣ ಸಮಿತಿ ಒತ್ತಾಯಿಸಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಕುಟುಂಬದ ಜೊತೆ ಶಾಸಕ ಡಾ.ವೈ ಭರತ್ ಶೆಟ್ಟಿ ಹಾಗೂ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಮುಖ ಬೇಡಿಕೆ ಬಗ್ಗೆ ಚರ್ಚಿಸಲಾಯಿತು.
ಭೂಮಿಯನ್ನ ಕಳೆದುಕೊಳ್ಳುತ್ತಿರುವ ರೈತ ಮುಖಂಡರ ಜೊತೆ ಹಾಗೂ ನಾಲ್ಕನೇ ಹಂತದ ಎಂ ಆರ್ ಪಿ ಎಲ್ ಭೂಸ್ವಾಧೀನ ನಿರ್ವಸಿತರ ಸಮಿತಿಯ ಮುಖಂಡರ ಜೊತೆ ಅವರ ಅಹವಾಲುಗಳನ್ನು ಆಲಿಸಿದರು.
ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ಈ ಹಿಂದೆ ಪುನರ್ ವಸತಿ ಕಾಲನಿಯಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಈ ಬಾರಿ ಅಂತಹ ಸಮಸ್ಯೆಯನ್ನು ನಿರ್ವಸಿತರು ಎದುರಿಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ನಿರ್ವಸಿತ ಕುಟುಂಬಕ್ಕೆ ಉದ್ಯೋಗಕ್ಕೆ ಪ್ರಾಮುಖ್ಯತೆ ನೀಡಿ ಎಂದರು.
ಹಿತ ರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಜೋಕಿಂ ಐವನ್ ಡೋನಿ ಸುವಾರೀಸ್, ಭೋಜರಾಜ್ ಸೂರಿಂಜೆ,ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ಉಪಾಧ್ಯಕ್ಷ ಜಿ.ಕೆ ಪೂವಪ್ಪ, ಹೆನ್ರಿ ಫೆರ್ನಾಂಡಿಸ್, ಪ್ರಧಾನ ಕಾರ್ಯದರ್ಶಿ ಕೇಶವ ಶೆಟ್ಟಿ, ಕಾರ್ಯದರ್ಶಿ ಹೇಮನಾಥ್, ಕೋಶಾಧಿಕಾರಿ ಕುಸುಮಾಕರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸುರೇಶ್ ರಾವ್,ಕೃಷ್ಣಮೂರ್ತಿ, ಸಂಚಾಲಕ ಸ್ಟಾನಿ ಫೆರ್ನಾಂಡಿಸ್ , ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
11/10/2022 02:41 pm