ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಅನಾರೋಗ್ಯ ಪೀಡಿತ ಬಾಲಕಿಗೆ ಸಹಾಯ ಹಸ್ತ

ಮುಲ್ಕಿ:ಅಖಿಲ ಭಾರತ ವಿಮಾ ಪ್ರತಿನಿಧಿ ಗಳ ಸಂಘಟನೆ ಮುಲ್ಕಿ ಘಟಕದ ಮಹಿಳಾ ಒಕ್ಕೂಟದ ವತಿಯಿಂದ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುವ ಕಾರ್ಯಕ್ರಮ ನಡೆಯಿತು.

ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಕೆಮ್ಮಡೆಯ ಕೊಯ್ಲಾದ 4 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಎಚ್1ಎನ್1 ಕಾಯಿಲೆಯಿಂದ ಬಳಲುತಿದ್ದು ಪ್ರಜ್ಞೆ ಬಾರದೆ ಸುಮಾರು ದಿನಗಳಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಹಿಳಾ ಒಕ್ಕೂಟದ ವತಿಯಿಂದ ರೂಪಾಯಿ 25000 ರೂವನ್ನು ಬಾಲಕಿಯ ಚಿಕಿತ್ಸೆಗೆ ನೀಡಲಾಯಿತು

ಈ ಸಂದರ್ಭ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜ್ಯೋತಿ. ಎ. ಶೆಟ್ಟಿ, ಮಹಿಳಾ ಕಾರ್ಯದರ್ಶಿ ಸಂಗೀತ. ಕೆ. ಶೆಟ್ಟಿ, ಕೋಶಾಧಿಕಾರಿ ಗುಲಾಬಿ ಸುರೇಂದ್ರ, ಮಹಿಳಾ ಸಂಘಟನಾ ಕಾರ್ಯದರ್ಶಿ ಗ್ರೇಸಿ ಸಿಕ್ವೆರ, ಸಂಘಟನಾ ಕಾರ್ಯದರ್ಶಿ ಎಂ. ಎಸ್. ಗುರುಪುರ, ಸಂದ್ಯಾ, ಮೆಟಿಲ್ದಾ. ಡಿಸೋಜ, ರೆನ್ಸಿಯ ಮನೆಯವರಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ ರೋಹನ್.ಡಿ. ಕಾಸ್ತಾ, ರವಿದಾಸ್ ಶೆಣೈ ಮತ್ತು ಅಖಿಲ ಭಾರತ ವಿಮಾ ಪ್ರತಿನಿಧಿ ಗಳ ಸಂಘಟನೆ ಮುಲ್ಕಿ ಘಟಕ ದ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/10/2022 02:02 pm

Cinque Terre

826

Cinque Terre

0

ಸಂಬಂಧಿತ ಸುದ್ದಿ