ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ:"ಹಿರಿಯ ನಾಗರಿಕರು ಜ್ಞಾನದ ಭಂಡಾರ ವಿದ್ದಂತೆ"

ಮುಲ್ಕಿ: ಹಿರಿಯರನ್ನು ಗೌರವಿಸುವುದು, ಹಿರಿಯರ ಮಾರ್ಗದರ್ಶನ ಪಡೆಯುವುದು, ಮತ್ತು ಹಿರಿಯರ ಅನುಭವಗಳನ್ನು ಹಂಚಿಕೊಂಡು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸುವುದು ಅಗತ್ಯ. ಹಿರಿಯ ನಾಗರಿಕರು ಜ್ಞಾನ ಭಂಡಾರ ವಿದ್ದಂತೆ ಎಂದು ಚರ್ಚ್ ಆಫ್ ಸೌತ್ ಇಂಡಿಯಾ ,ಸದರ್ನ್ ಡಯಾಸಿಸಿನ ನಿವೃತ್ತ ಖಜಾಂಜಿ ರೆ.ಎಡ್ವೀನ್ ವಾಲ್ಟರ್ ಹೇಳಿದರು. ಅವರು ಹಳೆಯಂಗಡಿಯ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚಿನಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದೇಶ ನೀಡಿದರು.

ಆರಾಧನೆಯನ್ನು ಸ್ಥಳೀಯ ಸಭಾ ಪಾಲಕ ರೆ. ವಿನಯ ಲಾಲ್ ಬಂಗೇರ ನಡೆಸಿಕೊಟ್ಟರು. ಹಿರಿಯ ನಾಗರಿಕರಾದ ಗಾಡ್ವಿನ್ ಕರ್ಕಡ ಮತ್ತು ರೋಸಿ ಕರ್ಕಡ ರವರು ವಾಕ್ಯ ಸಂದೇಶವಾಚಿಸಿದರು. ಕಾರ್ಯಕ್ರಮದ ಪ್ರಯುಕ್ತ ಸಭೆಯ ಹಿರಿಯ ನಾಗರಿಕರಾದ ಮರಿಯ ಕರ್ಕಡ, ಸುಶೀಲಾ ಹೇಮಾವತಿ ಸೋನ್ಸ್, ಜಯ ಸಾಲಿನ್ಸ್, ಎಡಿತ್ ನಳಿನಿ ಸಾಲಿನ್ಸ್, ಕಸ್ತೂರಿ ಸೋನ್ಸ್, ಲೂಸಿ ಕರ್ಕಡ, ರೋಸಿ ಕರ್ಕಡ, ಸರೋಜಿನಿ ಕೈರನ್ನ, ವಿಕ್ಟರ್ ಸೋನ್ಸ್, ವತ್ಸಲ ಸೋನ್ಸ , ಕರುಣಾಕರ ಬಂಗೇರ, ಬೆನೆಸ್ಟಿನ್ ಕುಂದರ್, ಡಯಾನ ಐಮನ್, ಜೋಸಫಿನ್ ಲಸ್ರಾಡೋ, ನಾನ್ಸಿ ಕರ್ಕಡ ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸುಜನ ವಾಲ್ಟರ್, ಹರಿಣಿ ಬಂಗೇರ ಹಾಗೂ ಸಭಾ ಪರಿಪಾಲನ ಸಮಿತಿಯ ಸದಸ್ಯರಾದ ಆಸ್ಟಿನ್ ಕರ್ಕಡ, ಎಚ್ ವಸಂತ ಬರ್ನಾಡ್, ಜೇಮ್ಸ್ ಕರ್ಕಡಾ, ಸಿಡ್ನಿ ಕರ್ಕಡ ಉಪಸ್ಥಿತರಿದ್ದರು.

ಸಭಾ ಪರಿಪಾಲನ ಸಮಿತಿಯ ಕಾರ್ಯದರ್ಶಿ ಲಾವಣ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಪರಿಪಾಲನ ಸಮಿತಿಯ ಕೋಶಾಧಿಕಾರಿ ಶ್ರೀಮತಿ ಶರ್ಲಿ ಬಂಗೇರ ವಂದಿಸಿದರು.

Edited By : PublicNext Desk
Kshetra Samachara

Kshetra Samachara

25/09/2022 03:14 pm

Cinque Terre

1.65 K

Cinque Terre

0

ಸಂಬಂಧಿತ ಸುದ್ದಿ