ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಹರೈನ್ : ಕನ್ನಡ ಭವನ ಲೋಕಾರ್ಪಣೆ

ಬಹರೈನ್ : ಕನ್ನಡ ಸಂಘ ದವರಿಂದ ನಿರ್ಮಿಸಲ್ಪಟ್ಟ ಕನ್ನಡ ಭವನವನ್ನು ಭಾರತದ ರಾಯಭಾರಿ ಪೀಯೂಷ್ ಶ್ರೀವಾಸ್ತವ ರವರು ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದರು

ಕನ್ನಡ ಭವನದ ಸಭಾಂಗಣದ ವೇದಿಕೆಯನ್ನು ಹಾಗೂ ಸಂಘದ ವಿವಿಧ ಚಟುವಟಿಕೆಗಳ ಕೊಠಡಿಗಳನ್ನು ವಿವಿಧ ದಾನಿಗಳಿಂದ ಉದ್ಘಾಟಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ಪೂರ್ವಾಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್, ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ಅನಿವಾಸಿ ವೇದಿಕೆಯ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಪತ್ರಕರ್ತರಾದ ವಿಶ್ವೇಶ್ವರ್ ಭಟ್, ರವಿ ಹೆಗ್ಡೆ, ಗಿರೀಶ್ ರಾವ್ ಹತ್ವಾರ್ ಬೆಂಗಳೂರಿನ ಉದ್ಯಮಿ ಆನಂದ್ ಭಟ್,

ಬೆಂಗಳೂರಿನ ಮಾಜಿ ಕೌನ್ಸಿಲ್ಲರ್ ಕೆ. ಮೋಹನ್ ದೇವ್ ಆಳ್ವಾ ಸಂಯುಕ್ತ ಅರಬ್ ಎಮಿರೇಟ್ಸ್ ನ ಫಾರ್ಚ್ಯೂನ್ ಗ್ರೂಪ್ ಹೋಟೆಲ್ಸ್ ನ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ, ಬಹರೈನ್ ನ ವಿ.ಕೆ.ಎಲ್. ಗ್ರೂಪ್ ನ ಅಧ್ಯಕ್ಷ ಡಾ. ವರ್ಗೀಸ್ ಕುರಿಯನ್, ಡಾ. ಮಹೇಶ್ ಜೋಶಿ, ಮತ್ತು ಡಾ. ಮನು ಬಳಿಗಾರ್ ಮತ್ತಿತರರು ಶುಭ ಹಾರೈಸಿದರು

ಕನ್ನಡ ಭವನ ಕಟ್ಟಡ ಸಮಿತಿಯ ಅಧ್ಯಕ್ಷ ಆಸ್ಟಿನ್ ಸಂತೋಷ್, ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

23/09/2022 07:29 pm

Cinque Terre

1.05 K

Cinque Terre

0

ಸಂಬಂಧಿತ ಸುದ್ದಿ