ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ:ಪಂಜದಲ್ಲಿ ಮೆಸ್ಕಾಂ ವತಿಯಿಂದ "ವಿದ್ಯುತ್ ಅದಾಲತ್"

ಮುಲ್ಕಿ: ಕರ್ನಾಟಕ ಸರಕಾರದ ಆದೇಶದಂತೆ ಗ್ರಾಮೀಣ ಭಾಗಗಳ ಜನರ ವಿದ್ಯುತ್ ಕುರಿತ ಸಮಸ್ಯೆಗಳ ಪರಿಹಾರಕ್ಕೆ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ಪಕ್ಷಿಕೆರೆ ಸಮೀಪದ ಪಂಜ ಕೊಯಿಕುಡೆಯಲ್ಲಿನ ವಿಠೋಭ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ವಹಿಸಿ ಮಾತನಾಡಿ ಗ್ರಾಮದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಮೆಸ್ಕಾಂ ಪಾತ್ರ ಮಹತ್ವದ್ದು ಎಂದರು.

ಮೆಸ್ಕಾಂ ಕಾವೂರು ಉಪ ವಿಭಾಗದ ಇಂಜಿನಿಯರ್ ಸಂತೋಷ್ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು. ಉಪಾಧ್ಯಕ್ಷ ಸುರೇಶ್ ಪಂಜ, ಭಜನಾ ಮಂದಿರದ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ, ಅಧ್ಯಕ್ಷ ಸತೀಶ್ ಎಂ. ಶೆಟ್ಟಿ ಮುಲ್ಕಿ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಕೃಷ್ಣ ಐತಾಳ್ ಮತ್ತು ಮೆಸ್ಕಾಂ ಹಳೆಯಂಗಡಿ ಶಾಖೆಯ ಪ್ರಭಾರ ಸಹಾಯಕ ಇಂಜಿನಿಯರ್ ಶೇಖರ್ ಅದಾಲತ್ ನಲ್ಲಿ ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

17/09/2022 05:34 pm

Cinque Terre

1.61 K

Cinque Terre

0

ಸಂಬಂಧಿತ ಸುದ್ದಿ