ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಕೃಷಿ ಉಳಿಸುವುದರ ಜೊತೆಗೆ ಮುಲ್ಕಿ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಅಗತ್ಯ": ಜೀವನ್ ಕೆ ಶೆಟ್ಟಿ

ಮುಲ್ಕಿ: ಮುಲ್ಕಿ ರೋಟರಿ ಕ್ಲಬ್ ಹಾಗೂ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ "ಇಂಜಿನಿಯರ್ಸ್ ಡೇ"ಕಾರ್ಯಕ್ರಮ ಕಾರ್ನಾಡ್ ರೋಟರಿ ಶತಾಬ್ಧ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜೋವಿನ್ ಪ್ರಕಾಶ್ ಡಿಸೋಜಾ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೀವನ್ ಕೆ ಶೆಟ್ಟಿ ಮಾತನಾಡಿ ಮುಲ್ಕಿ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ, ಕೃಷಿ, ಆಯುರ್ವೇದ ಜನರ ಜೀವನಾಡಿಯಾಗಿದ್ದು ಉಳಿಸಲು ಪ್ರಯತ್ನಿಸುವುದರ ಜೊತೆಗೆ ಮುಲ್ಕಿಯಲ್ಲಿ ಕೃಷಿ ಆಯುರ್ವೇದ ಇತ್ಯಾದಿ ಹಾಗೂ ಐಟಿ ಪಾರ್ಕ್ ಸ್ಥಾಪನೆಗೆ ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸೋಣ ಎಂದರು.

ವೇದಿಕೆಯಲ್ಲಿ ಅಸಿಸ್ಟೆಂಟ್ ಗವರ್ನರ್ ಎಮ್ ನಾರಾಯಣ, ಮೈಕಲ್ ಪಿಂಟೋ, ಕಾರ್ಯದರ್ಶಿ ಭುಜಂಗ ಕವತ್ತಾರ್,ಸಿವಿಲ್ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ನಿವೃತ್ತ ಉಪನ್ಯಾಸಕ ವೈ ಎನ್ ಸಾಲ್ಯಾನ್, ಮಾಜೀ ಅಧ್ಯಕ್ಷ ಶಿವರಾಂ ಜಿ ಅಮೀನ್, ರೊ. ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಡೀನ್ ಹಾಗು ವೈಸ್ ಪ್ರಿನ್ಸಿಪಾಲ್ ಡಾ. ಐ. ರಮೇಶ್ ಮಿತ್ತಂತಾಯ ರವರನ್ನು ಸನ್ಮಾನಿಸಲಾಯಿತು ಹಾಗೂ ಮುಲ್ಕಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಿಶಾಂತ್ ಶೆಟ್ಟಿ ಕಿಲೆಂಜೂರು ಹಾಗೂ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೀವನ್ ಕೆ ಶೆಟ್ಟಿ ಹಾಗೂ ಮುಲ್ಕಿ ಪರಿಸರದ ಇಂಜಿನಿಯರ್ ಗಳನ್ನು ಗುರುತಿಸಿ ಗೌರವಿಸಲಾಯಿತು. ಆಲ್ವಿನ್ ಪತ್ರಾವೋ, ಜಿನರಾಜ್ ಸಾಲ್ಯಾನ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

14/09/2022 09:15 pm

Cinque Terre

2.48 K

Cinque Terre

0

ಸಂಬಂಧಿತ ಸುದ್ದಿ