ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಮಂತೂರು ಗ್ರಾಮದ ಪೊಲೀಸ್ ಬೀಟ್ ಸಭೆ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ ಪೊಲೀಸ್ ಅಧಿಕಾರಿ ಸತೀಶ್ ಗ್ರಾಮಸ್ಥರಿಗೆ ಮಾಹಿತಿ ನೀಡಿ ಗ್ರಾಮಸ್ಥರು ಮೊಬೈಲ್ ಸಹಿತ ಅನೇಕ ಸಾಮಾಜಿಕ ಜಾಲತಾಣದ ಬಗ್ಗೆ ಜಾಗೃತರಾಗಬೇಕು, ಆನ್ಲೈನ್ ಲೋನ್ ಮೋಸ ಮಾಡುವವರ ವಿರುದ್ಧ ಎಚ್ಚರಿಕೆ ವಹಿಸಬೇಕು, ಮನೆ ಮನೆಗೆ ಬರುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದರು.
ಅವರು ಮಾತನಾಡಿ ಅಪ್ರಾಪ್ತ ರಿಗೆ ಚಾಲನೆಗೆ ವಾಹನಗಳನ್ನು ನೀಡಬೇಡಿ ಸಿಕ್ಕಿಬಿದ್ದರೆ ಕಠಿಣ ಶಿಕ್ಷೆಗೆ ಒಳಪಡುತ್ತೀರಿ ಎಂದರು. ಚಿನ್ನಾಭರಣಗಳ ಬಗ್ಗೆ ತೀವ್ರ ನಿಗಾವಹಿಸಿ, ಮಕ್ಕಳು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಗಮನಹರಿಸಿ. ಹೊರ ರಾಜ್ಯದ ಕಾರ್ಮಿಕರ ಬಗ್ಗೆ ನಿಗಾ ವಹಿಸಿ, ದುಷ್ಕೃತ್ಯಗಳನ್ನು ತಡೆಯಲು ಸಿಸಿ ಕ್ಯಾಮೆರಾ ಅಳವಡಿಸಿ ಅಪರಾಧಮುಕ್ತ ಸಮಾಜಕ್ಕಾಗಿ ಗ್ರಾಮಸ್ಥರ ಸಹಕಾರ ಬೇಕು ಎಂದರು.
ಗ್ರಾಮಸ್ಥರಾದ ಶಂಕರ್ ಮಾಸ್ಟರ್, ಸೀತಾರಾಮ ಭಟ್, ಪ್ರವೀಣ್ ಶಿಮಂತೂರು, ಪ್ರೇಮಲತಾ ಶೆಟ್ಟಿ ಮತ್ತಿತರರು ಸಮಸ್ಯೆಗಳ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶಶಿಕಲಾ, ವಿಶ್ವನಾಥ ಶೆಟ್ಟಿ, ವಿಜಯಕುಮಾರ್ ಶೆಟ್ಟಿ ನಡಿಗುತ್ತು, ದೇವಸ್ಥಾನದ ಮ್ಯಾನೇಜರ್ ಕಿಶೋರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
12/09/2022 07:29 pm