ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಒಡೆಯರಬೆಟ್ಟು ಅಪಾಯಕಾರಿ ಬಾವಿಗೆ ತಡೆಗೋಡೆ ನಿರ್ಮಿಸಿ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೊಳಚಿಕಂಬಳ ರಸ್ತೆಯ ಒಡೆಯರ ಬೆಟ್ಟು ದುರ್ಗಾ ಬಹು ಮಹಡಿ ಕಟ್ಟಡದ ಬಳಿಯ ಮುಲ್ಕಿ ಬಸ್ಸು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಲು ದಾರಿ ಯಲ್ಲಿ ಸೂಕ್ತ ತಡೆಗೋಡೆ ಇಲ್ಲದೆ ಬಾವಿ ಅಪಾಯವನ್ನು ಆಹ್ವಾನಿಸುತ್ತಿದೆ.

ಖಾಸಗಿಯವರ ಜಾಗದಲ್ಲಿರುವ ಈ ಬಾವಿ ಬದಿಯಲ್ಲಿ ಕಾಲುದಾರಿ ಮುಲ್ಕಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಗೆ ಸಂಪರ್ಕ ಕಲ್ಪಿಸುತ್ತದೆ.

ತಡೆಗೋಡೆ ಇಲ್ಲದ ಈ ಬಾವಿಗೆ ಸ್ಥಳೀಯರು ಕಲ್ಲುಗಳನ್ನು ಇಟ್ಟು ಮತ್ತಷ್ಟು ಅಪಾಯ ತಪ್ಪಿಸುವಂತೆ ಮಾಡಿದ್ದಾರೆ.

ಬಾವಿಯ ಬಳಿಯಲ್ಲಿರುವ ಕಾಲುದಾರಿಯಲ್ಲಿ ಅನೇಕರು ಸಂಚಾರ ನಡೆಸುತ್ತಿದ್ದು ಅಪಾಯ ಸಂಭವಿಸುವ ಮೊದಲೇ ಮುಲ್ಕಿ ನಗರ ಪಂಚಾಯತಿ ಎಚ್ಚೆತ್ತು ಬಾವಿಗೆ ಸೂಕ್ತ ತಡೆಗೋಡೆ ನಿರ್ಮಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

12/09/2022 05:35 pm

Cinque Terre

1.82 K

Cinque Terre

1

ಸಂಬಂಧಿತ ಸುದ್ದಿ