ಮುಲ್ಕಿ :ಕಿಡ್ನಿ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಶಿಮಂತೂರು ಗ್ರಾಮದ ಕುಬೆವೂರು ನಿವಾಸಿ ಬೇಬಿ .ಕೆ ಸುವರ್ಣ ಅವರ ಮನೆಗೆ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಡಾ.ರಾಜಶೇಖರ ಕೋಟ್ಯಾನ್ ಅವರು ಭೇಟಿ ನೀಡಿ ಧನ ಸಹಾಯವನ್ನು ನೀಡಿ ಆರೋಗ್ಯವಿಚಾರಿಸಿದರು.
ನಂತರ ಕುಟುಂಬಕ್ಕೆ ಇನ್ನಷ್ಟು ಧನ ಸಹಾಯ ನೀಡುವ ಭರವಸೆ ನೀಡಿದರು.ಈ ಸಂದರ್ಭ ಕಾಂಗ್ರೇಸ್ ನ ಹಿಂದುಳಿದ ವರ್ಗ ಗಳ ರಾಜ್ಯ ಪ್ರಧಾನ ಕಾರ್ಯದರ್ಶಿ(ಒಬಿಸಿ) ಗುರುರಾಜ್ ಎಸ್ ಪೂಜಾರಿ,ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ್ ಪಡಂಗ,ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ಧನಂಜಯ ಮಟ್ಟು ಹಾಗೂ ಮತ್ತಿತರರು ಹಾಜರಿದ್ದರು.
Kshetra Samachara
09/09/2022 04:28 pm