ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಲಂಡನ್‌ವರೆಗೆ ಸೈಕಲ್‌ನಲ್ಲಿ ಪ್ರಯಾಣ ಹೊರಟ ಕ್ಯಾಲಿಕಟ್ ಸನ್ ರೈಸ್ ರೋಟರಿ ಸದಸ್ಯಗೆ ಸ್ವಾಗತ

ಮೂಲ್ಕಿ: ಉತ್ತಮ ಸಂದೇಶ ಸಾರುವ ಸಾಹಸ ಯಾತ್ರೆಗಳು ಯಾವತ್ತೂ ಅಭಿನಂದನೀಯವಾಗಿದ್ದು ಸಾರ್ವಜನಿಕರ ಹೆಚ್ಚು ಪ್ರ್ರೊತ್ಸಾಹ ಅಗತ್ಯವಿದೆ ಎಂದು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು. ಕೇರಳದ ತಿರುವನಂತಪುರದಿಂದ ಬ್ರಿಟನ್ ದೇಶದ ರಾಜಧಾನಿ ಲಂಡನ್ ವರೆಗೆ ಸೈಕಲ್ ಮೂಲಕ ಪ್ರಯಾಣ ಹೊರಟಿರುವ ಕ್ಯಾಲಿಕಟ್ ಸನ್ ರೈಸ್ ರೋಟರಿ ಸದಸ್ಯ ಫಯಾಸ್ ಅಹಮ್ಮದ್ ರವರನ್ನು ಮುಲ್ಕಿ ಯಲ್ಲಿ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಧ್ಯಮದೊಂದಿಗೆ ಮಾತನಾಡಿದ ಫಯಾಸ್ ಅಹಮ್ಮದ್, ಅ.15ರಂದು ಕೇರಳದ ಕ್ಯಾಲಿಕಟ್ ನಿಂದ ಯಾತ್ರೆ ಆರಂಭಗೊಂಡಿದ್ದು ಒಂದು ಸೈಕಲ್ ನಿಂದ 450 ದಿನಗಳಲ್ಲಿ ಮೂವತ್ತು ಸಾವಿರ ಕಿಮೀ ಕ್ರಮಿಸಿ ಲಂಡನ್ ತಲುಪಲಿದ್ದೇನೆ. ದಾರಿ ಮಧ್ಯೆ 2ಖಂಡಗಳು ಹಾಗೂ 35 ದೇಶಗಳನ್ನು ತಲುಪಲಿದ್ದೇನೆ ಎಂದರು.

ಪಾಕಿಸ್ತಾನ ಮುಖಾಂತರ ಹೋಗುವುದನ್ನು ತಪ್ಪಿಸುವ ಸಲುವಾಗಿ ಮುಲ್ಕಿ ಯಿಂದ ಕುಂದಾಪುರ, ಪಣಜಿ, ಮುಂಬೈ ತಲುಪಿ ಅಲ್ಲಿಂದ ವಿಮಾನದ ಮೂಲಕ ಯು.ಎ.ಇ ತಲುಪಿ ಅಲ್ಲಿಂದ ಸೈಕಲ್ ನಲ್ಲಿ ಪ್ರಯಾಣ ಬೆಳೆಸಲಿದ್ದೇನೆ. ದಾರಿಯಲ್ಲಿ ಪ್ರತೀಯೊಂದು ಕಡೆಯಲ್ಲಿ ರೋಟರಿ ಸದಸ್ಯರು ನನಗೆ ಸಹಕಾರ ನಿಡಲಿದ್ದಾರೆ.2019ರಲ್ಲಿ 7ದೇಶಗಳು 8ಸಾವಿರ ಕಿಮೀ ಸೈಕಲ್ ಯಾತ್ರೆಯಲ್ಲಿ ಸಿಂಗಾಪುರ್ ತಲುಪಿರುವ ಅನುಭವ ವಿದೆ ಎಂದರು.

ಮುಲ್ಕಿ ರೋಟರಿ ಅಧ್ಯಕ್ಷ ಜೊವಿನ್ ಪ್ರಕಾಶ್ ಡಿಸೋಜ, ಸದಸ್ಯರಾದ ಭುಜಂಗ ಕವತ್ತಾರು, ರವಿಚಂದ್ರ, ಶಿವರಾಮ್,ಜೋಯಲ್ ಹೆರಾಲ್ಡ್ ಡಿಸೋಜ,ಪ್ರೀತಮ್ ಉಪಾದ್ಯಾಯ, ಸಚ್ಚಿದಾನಂದ ಉಡುಪ ಮತ್ತಿತರರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

04/09/2022 06:09 pm

Cinque Terre

1.18 K

Cinque Terre

0

ಸಂಬಂಧಿತ ಸುದ್ದಿ