ಮುಲ್ಕಿ: ಆಧುನಿಕತೆಯ ಭರಾಟೆಯಲ್ಲಿ ಟೈಲರ್ ವೃತ್ತಿಯು ಅಪತ್ತಿನಲ್ಲಿದೆ, ಯುವ ಜನಾಂಗ ಇದರ ಕಡೆಗೆ ಬರುತ್ತಿಲ್ಲ ಮಹಿಳೆಯರು ಮಾತ್ರ ಸ್ವಲ್ಪ ಮಟ್ಟಿಗೆ ಆಸಕ್ತಿ ಇದ್ದು ಟೈಲರ್ ಉಳಿಸಿ ಮುಂದಿನ ಪೀಳಿಗೆಗೆ ಮುಟ್ಟಿಸುವ ಕೆಲಸ ಆಗಬೇಕಾಗಿದೆ ಎಂದು ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ಕಿನ್ನಿಗೋಳಿ ವಲಯ ಸಮಿತಿಯ 22 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಸಮಿತಿಯ ಅಧ್ಯಕ್ಷ ನಾರಾಯಣ ಬಿ ಎ ಮಾತನಾಡಿ ನಮ್ಮ ಟೈಲರ‍್ಸ್ ಸಂಘಟನೆ ಹಾಗೂ ನಮ್ಮ ವೃತ್ತಿ ಭಾಂಧವರನ್ನು ಸರಕಾರ ಕಡೆಗಣಿಸಿದೆ ನಮ್ಮ ಬೇಡಿಕೆ ಇನ್ನೂ ಆಗಿಲ್ಲ ಸಂಘಟನೆಯ ಮೂಲಕ ಹೋರಾಟ ಆಗತ್ಯವಿದೆ ಎಂದರು.
ಕಿನ್ನಿಗೋಳಿ ಸಮಿತಿಯ ಅಧ್ಯಕ್ಷ ವಸಂತ ಸಪಲಿಗ ಅಧ್ಯಕ್ಷತೆವಹಿಸಿದ್ದರು. ರಾಜ್ಯ ಸಮಿತಿಯ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಲಯನ್ಸ್ ಮಾಜಿ ಅಧ್ಯಕ್ಷೆ ಹಿಲ್ದಾ ಡಿಸೋಜ, ಮೂಲ್ಕಿ - ಮೂಡಬಿದಿರೆ ಕ್ಷೇತ್ರ ಅಧ್ಯಕ್ಷ ಅಣ್ಣಪ್ಪ ಮೂಡಬಿದಿರೆ, ಕಿನ್ನಿಗೋಳಿ ವಲಯ ಸಮಿತಿಯ ಗೌರವಾಧ್ಯಕ್ಷ ಶಂಕರ್ ಬಿ. ಕೋಟ್ಯಾನ್ , ಸಹನಾ, ಸುಗಂಧ, ತುಳಸಿ, ಜಯಲಕ್ಷ್ಮೀ ಉಲ್ಲಂಜೆ, ಸಹನಾ, ಸಾರಿಕಾ , ರಮೇಶ್ ಬಂಗೇರಾ, ಪ್ರಭಾಕರ ಶೆಟ್ಟಿಗಾರ್, ಜಯಂತ ಸಾಲ್ಯಾನ್, ಚಂದ್ರಹಾಸ್ ಕೋಟ್ಯಾನ್, ಹರೀಶ್‌ಜಿ. ಪದ್ಮಶಾಲಿ ದಾಮೋದರ ಶೆಟ್ಟಿಗಾರ್ ಮತ್ತಿತತರು ಉಪಸ್ಥಿರಿದ್ದರು.
ಹಿರಿಯ ಟೈಲರ್ ಉಮೇಶ್ ಶೆಟ್ಟಿಗಾರ್ ರವರನ್ನು ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಸರಿತಾ ಕೋಟ್ಯಾನ್ ಸ್ವಾಗತಿಸಿದರು. ಉಷಾ ಡಿ. ಶೆಟ್ಟಿಗಾರ್ ವರದಿ ವಾಚಿಸಿದರು. ಯಶೋಧರ ಸಮ್ಮಾನ ಪತ್ರ ವಾಚಿಸಿದರು. ರಾಜಾರಾಮ್ ವಂದಿಸಿದರು. ಮೋಹನ್ ಎಸ್. ಕೋಡಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
28/08/2022 08:05 pm