ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ದ ಅಮೃತ ಸಂಭ್ರಮ 2022 ಅಂಗವಾಗಿ ಹಸಿರು ವಾಣಿ ಹೊರೆ ಕಾಣಿಕೆ ಆಕರ್ಷಕ ಮೆರವಣಿಗೆ ಕಾರ್ಯಕ್ರಮ ನಡೆಯಿತು.
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಶ್ ಶೆಟ್ಟಿ ಹಾಗೂ ಮುಲ್ಕಿ ಠಾಣಾಧಿಕಾರಿ ಕುಸುಮಾದಾರ, ಶ್ರೀ ವೀರಭದ್ರ ದೇವಸ್ಥಾನದ ಚಂದಪ್ಪ ಗುರಿಕಾರರು, ಆಡಳಿತ ಮೊಕ್ತೇಸರ ಪುರಂದರ ಶೆಟ್ಟಿಗಾರ್ ಹಸಿರು ವಾಣಿಯ ಮೆರವಣಿಗೆಗೆ ಚಾಲನೆ ನೀಡಿದರು.ಹದಿನಾರು ಶ್ರೀ ವೀರಭದ್ರ ದೇವಸ್ಥಾನ ಹಾಗೂ ವಲಯ ವೇದಿಕೆಗಳಿಂದ ಅಮೃತ ಸಂಭ್ರಮಕ್ಕೆ ಹಸಿರು ವಾಣಿ ಮೆರವಣಿಗೆಯು ವಿವಿಧ ಸ್ತಬ್ಧ ಚಿತ್ರಗಳು ಹಾಗೂ ವಾದ್ಯಗೋಷಗಳೊಂದಿಗೆ ಮುಲ್ಕಿಯ ಮಾನಪಾಡಿ ಶ್ರೀ ವೀರಭದ್ರ ದೇವಸ್ಥಾನದಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ನಡೆಯಿತು.
ಅಗಸ್ಟ್ 27 ನಾಳೆ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಮೃತ ಸಂಭ್ರಮ 2022 ನಡೆಯಲಿದ್ದು ರಾಜ್ಯಸಭಾ ಸದಸ್ಯ ಪದ್ಮವಿಭೂಷಣ ಡಾಕ್ಟರ್ ವೀರೇಂದ್ರ ಹೆಗ್ಗಡೆ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
Kshetra Samachara
26/08/2022 08:35 pm