ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆಲ ಕಡೆ ಕೃತಕ ನೆರೆ ಉಂಟಾಗಿ ಗದ್ದೆಗೆ ಮಳೆ ನೀರು ನುಗ್ಗಿದ್ದು ಕೃಷಿ ಹಾನಿ ಸಂಭವಿಸಿದ್ದು ಇನ್ನೂ ಕೆಲ ಕಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಮುಲ್ಕಿ ತಾಲೂಕು ವ್ಯಾಪ್ತಿಯ ತೋಕೂರು, ಶಿಮಂತೂರು, ಕುಬೆವೂರು ಬಳಿ ಗದ್ದೆಗೆ ಮಳೆ ನೀರು ನುಗ್ಗಿ ಹಾನಿ ಸಂಭವಿಸಿದ್ದು,ಭಾರಿ ಮಳೆಗೆ ತೋಕೂರು ಲೈಟ್ ಹೌಸ್ ನಿಂದ ಶ್ರೀ ಸುಬ್ರಮಣ್ಯ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆ, ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜ ನದಿ ತೀರದ ಪ್ರದೇಶಗಳಲ್ಲಿ ಬಾರಿ ಮಳೆಗೆ ನಂದಿನಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ಕೆಲ ಕಡೆ ಕೃತಕ ನೆರೆ ಭೀತಿ ಉಂಟಾಗಿದೆ.
Kshetra Samachara
23/08/2022 10:14 am