ಮುಲ್ಕಿ: ತಾಲ್ಲೂಕು ವ್ಯಾಪ್ತಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದ್ದರೂ ಬೆಲೆ ಏರಿಕೆ ನಡುವೆ ವ್ಯಾಪಾರ ಮಾತ್ರ ಕಳೆಗುಂದಿದೆ.
ಕಳೆದ ದಿನದ ಹಿಂದೆ ದೇಶದ 75 ಸ್ವಾತಂತ್ರ್ಯೋತ್ಸವ ನಡೆದಿದ್ದು ಅದರ ಗುಂಗಿನಿಂದ ಜನ ಇನ್ನೂ ಹೊರ ಬಾರದ ಕಾರಣ ಅಷ್ಟಮಿ ಹಬ್ಬದ ವ್ಯಾಪಾರ ವಹಿವಾಟು ಕಳೆಗುಂದಿದೆ ಎಂದು ವ್ಯಾಪಾರಸ್ಥರ ಆಳಲು.
ಆದರೂ ಮುಲ್ಕಿ ಕಿನ್ನಿಗೋಳಿ ಹಳೆಯಂಗಡಿ ಕಟೀಲು ಪಕ್ಷಿಕೆರೆಯ ಗ್ರಾಮೀಣ ಪ್ರದೇಶದಲ್ಲಿ ಬೆಲೆ ಏರಿಕೆ ನಡುವೆ ಅಷ್ಟಮಿಗೆ ಮೂಡೆ, ಹಣ್ಣು ಹಂಪಲು ಹಾಗೂ ಹೂವಿನ ವ್ಯಾಪಾರ ಸಾಧಾರಣದ ಮಟ್ಟಿಗೆ ನಡೆದಿದೆ.
Kshetra Samachara
18/08/2022 06:15 pm