ಮಂಗಳೂರು;ಕೋಮು ಸೌಹಾರ್ಧತೆಗೆ ಹೆಸರಾದ ಕರ್ನಾಟಕದಲ್ಲಿ ಇತ್ತೀಚಿನಿಂದ ಸಣ್ಣ ಪುಟ್ಟ ವಿಚಾರಗಳನ್ನೇ ಮುಂದಿಟ್ಟು ಅಹಿತಕರ ಘಟನೆಗಳು ನಡೆದಿದ್ದು ಸಾರ್ವಜನಿಕರು ತೀವ್ರ ಆತಂಕಕ್ಕೀಡಾಗಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಪ್ರಜೆಗಳನ್ನೂ ಒಂದೇ ಕಣ್ಣಿನಿಂದ ನೋಡ ಬೇಕಾದ ಸರಕಾರವು ತಾರತಮ್ಯ ನೀತಿ ಅನುಸರಿಸಿ ರಾಜಕೀಯ ಲಾಭಕೊಯ್ಯಲು ಶ್ರಮಿಸುತ್ತಿದೆ.ಈ ಎಲ್ಲಾ ಬೆಳವಣಿಗಗಳು ದೇಶದ ಅಭಿವೃದ್ದಿಯನ್ನು ಕುಂಠಿತ ಗೊಳಿಸುವುದಲ್ಲದೇ ಜಾಗತಿಕವಾಗಿ ದೇಶವು ಅಪಹಾಸ್ಯಕ್ಕೆ ಒಳಗಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದ ತೊಂಬೈತ್ತೈದು ಶೇಖಡ ಶಾಂತಿ ಪ್ರಿಯ ಜನರನ್ನು ಪ್ರತಿನಿಧೀಕರಿಸುವ ಉಭಯ ಕಡೆಯ ಧಾರ್ಮಿಕ ಮುಖಂಡರು ತಮ್ಮ ಅನುಯಾಯಿಗಳಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶಗಳ ಮೂಲಕ ಇನ್ನಷ್ಟು ಮಾರ್ಗ ದರ್ಶನ ನೀಡ ಬೇಕಾಗಿದೆ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಟಿದೆ.
ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಕೂಲಂಕುಶವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಸೇರಿದ ಒಕ್ಕೂಟದ ತುರ್ತು ಸಭೆಯಲ್ಲಿ, ಅಶಾಂತಿಯ ವಾತಾವರಣವನ್ನು ಬೆಳೆಯಲು ಬಿಡದೇ ಎಲ್ಲಾ ಧರ್ಮದ ಪ್ರಮುಖರನ್ನು ಒಟ್ಟು ಸೇರಿಸಿ ಇದಕ್ಕೆ ಶಾಸ್ವತ ಪರಿಹಾರ ಕಂಡು ಕೊಳ್ಳುವ ಅಗತ್ಯವನ್ನು ದಾರಿಮಿ ಉಲಮಾ ಒಕ್ಕೂಟ ಮನಗಂಡಿದೆ. ಮುಂದಿನ ದಿನಗಳಲ್ಲಿ ಶಾಂತಿಗೆ ಪೂರಕವಾಗುವ ಉಪಕ್ರಮಗಳನ್ನು ಆಯೋಜಿಸಲು ಸಂಘಟನೆ ತೀರ್ಮಾನಿಸಿದ್ದು ಎಲ್ಲಾ ಧರ್ಮದ ಜನರ ಬೆಂಬಲವನ್ನು ಕೋರಲಾಗುವುದು.
ದಾರಿಮಿ ಒಕ್ಕೂಟದ ಎಸ್ ಬಿ ಮುಹಮ್ಮದ್ ದಾರಿಮಿ ಉಪ್ಪಿನಂಗಡಿ ಅದ್ಯಕ್ಷತೆ ವಹಿಸಿದ್ದರು.ಕೆ ಆರ್ ಹುಸೈನ್ ದಾರಿಮಿ ಉದ್ಘಾಟಿಸಿದರು.ಮೌಲಾನ ಅಬ್ದುಲ್ ಅಝೀಝ ದಾರಿಮಿ ಪ್ರಸ್ತಾವನೆಗೈದರು.ಹಿರಿಯರಾದ ಹೈದರ್ ದಾರಿಮಿ ಕರಾಯ,ತಬೂಕ್ ದಾರಿಮಿ, ಕುಕ್ಕಿಲ ದಾರಿಮಿ ,ಕಡಬ ಸಿದ್ದೀಖ್ ದಾರಿಮಿ,ಸಂಪ್ಯ ಹಮೀದ್ ದಾರಿಮಿ,ಕೆ ಎಲ್ ಉಮರ್ ದಾರಿಮಿ,ಕೆಲಿಂಜ ಅಬ್ಬಾಸ್ ದಾರಿಮಿ,ಮಜೀದ್ ದಾರಿಮಿ ಘಟ್ಟಮನೆ,ಅಹ್ಮದ್ ದಾರಿಮಿ ಕಂಬಳಬೆಟ್ಟು,ಖಾಸಿಂ ದಾರಿಮಿ ನಂದಾವರ ಭಾಗವಹಿಸಿದರು.
Kshetra Samachara
17/08/2022 09:38 pm