ಮುಲ್ಕಿ: ಇತಿಹಾಸ ಪ್ರಸಿದ್ದ ಮುಲ್ಕಿ ಸಮೀಪದ ಶ್ರೀಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಆಗಸ್ಟ್ 17ರ ಬುಧವಾರ ಸಿಂಹ ಸಂಕ್ರಮಣದಂದು ಶ್ರೀ ಅದಿಜನಾರ್ದನ ದೇವರಿಗೆ ವಿಶೇಷ ಲಕ್ಷ ತುಳಸಿ ಅರ್ಚನೆ ಮತ್ತು ಬ್ರಹತಿ ಸಹಸ್ರ ಯಾಗ ದೇವಸ್ಥಾನದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ನಡೆಯಲಿದ್ದು ಭರದ ಸಿದ್ಧತೆ ನಡೆದಿದೆ.
ಈಗಾಗಲೇ ದೇವಸ್ಥಾನವನ್ನು ವಿದ್ಯುತ್ ದೀಪಾಲಂಕೃತ ಗೊಳಿಸಲಾಗಿದ್ದು ಭಕ್ತರು ದೇವಸ್ಥಾನಕ್ಕೆ ತುಳಸಿ ಅರ್ಚನೆಗೆ ತುಳಸಿ ತಂದೊಪಿಸಿದ್ದು ವ್ಯವಸ್ಥಿತವಾಗಿ ಜೋಡಿಸಿ ಇಡಲಾಗಿದೆ.
ಮದ್ಯಾಹ್ನ 12 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆಯು ನಡೆಯಲಿದೆ.ಬಳಿಕ ಯಕ್ಷ ಲಹರಿ ಯುಗಪುರುಷ ಕಿನ್ನಿಗೋಳಿ ರವರಿಂದ ಸುದನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ಎನ್ ಶೆಟ್ಟಿ ಹಾಗೂ ಸದಸ್ಯರು ತಿಳಿಸಿದ್ದಾರೆ.
Kshetra Samachara
16/08/2022 07:57 pm