ಮಂಗಳೂರು: ರಾಜಕಾರಣವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ದೇಶಸೇವೆ ಮಾಡಬಹುದು ಎಂದು ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ್ ವಿಠಲ ಕಿಣಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್, ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಯೋಜಿಸಿದ ಸಂವಾದದಲ್ಲಿ ಅವರು ಮಾತನಾಡಿದರು. ಹಿಂದಿನ ರಾಜಕಾರಣಿಗಳು ಒಳ್ಳೆಯವರಾಗಿದ್ದರು, ಅಂದು ರಾಜಕಾರಣದಲ್ಲಿ ತ್ಯಾಗ ಸೇವೆಗಳಿದ್ದವು. ರಾಜಕೀಯ ನಾಯಕರು ಪರಸ್ಪರ ಗೌರವ ನೀಡುತ್ತಿದ್ದರು. ರಾಜಕೀಯ ಪಕ್ಷಗಳು ಬೇರೆ ಬೇರೆಯಾಗಿದ್ದರೂ ಎಲ್ಲ ರಾಜಕಾರಣಿಗಳ ಉದ್ದೇಶ ದೇಶದ ಸರ್ವಾಂಗೀಣ ಪ್ರಗತಿಯೇ ಆಗಿತ್ತು. ಆದರೆ ಈಗ ಅಂತಹ ಧ್ಯೇಯೋದ್ದೇಶಗಳು ಕಾಣುತ್ತಿಲ್ಲ, ಈಗಿನ ರಾಜಕೀಯ ನೋಡಿದರೆ ದುಃಖ ಆಗುತ್ತದೆ ಎಂದರು.
ಈ ಸಂದರ್ಭ ಆಜಾದಿಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ 94ರ ಹರೆಯದ ಮಟ್ಟಾರ್ ವಿಠಲ ಕಿಣಿ ರವರನ್ನು ಸನ್ಮಾನಿಸಲಾಯಿತು.
Kshetra Samachara
14/08/2022 07:24 am