ಮುಲ್ಕಿ:ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿ ಹಾಗೂ ಮಂಗಳೂರು ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಸಹಯೋಜನೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಾನೂನು ಮಾಹಿತಿ ಶಿಬಿರ ನಡೆಯಿತು.
ನವದೆಹಲಿಯ ಭಾರತದ ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಸುಭಾಸ್ಚಂದ್ರ ಸಾಗರ್ ರವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಸಹಕಾರಿ ಬ್ಯಾಂಕುಗಳು ದೇಶದ ಪ್ರಗತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದ್ದು, ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಸಹಕಾರಿ ಬ್ಯಾಂಕುಗಳ ಕೊಡುಗೆ ಅಪಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷ ಡೇನಿಯಲ್ ದೇವರಾಜ್ ವಹಿಸಿ ಮಾತನಾಡಿ ದೇಶದ ಕಾನೂನನ್ನು ಗೌರವಿಸುವ ಮುಖಾಂತರ ಸರ್ವರಿಗೂ ಸಮಪಾಲು ಸಮ ಬಾಳು ವಂತಾಗಬೇಕು ಎಂದರು. ಸಮಾರಂಭದಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವದ ಪ್ರಯುಕ್ತ ನೂರು ವರ್ಷಗಳನ್ನು ಪೂರೈಸಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಸೌತ್ ಕೆನರಾ ಗವರ್ಮೆಂಟ್ ಆಫೀಸರ್ಸ್ ಕೋಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ್ ನಾಯಕ್‌ರವರನ್ನು ಗೌರವಿಸಲಾಯಿತು.
ಅತಿಥಿಗಳಾಗಿ ಮುಲ್ಕಿ ಸಿಎಸ್.ಐ ಚರ್ಚ್ ನ ಸಭಾಪಾಲಕ ರೆವೆ. ಸ್ವೀವನ್ ಸರ್ವೋತ್ತಮ,ರೆವೆ. ಹಳೆಯಂಗಡಿ ಸಿ ಎಸ್.ಐ ಚರ್ಚ್ ಸಭಾ ಪಾಲಕ ವಿನಯಲಾಲ್ ಬಂಗೇರ,ರೆವೆ ವಿಲಿಯಂ ಕುಂದರ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ
ಪ್ರಸಾದ್ ವಕೀಲರು ಕರ್ನಾಟಕ ಸೊಸೈಟಿ ರಿಜಿಸ್ಟ್ರೇಷನ್ ಆ್ಯಕ್ಟ್” ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಭಾರತದ ಕ್ರೈಸ್ತ ಚರ್ಚ್ ಗಳ ಒಕ್ಕೂಟದ ಕಾನೂನು ಸಲಹೆಗಾರ ರೆವೆ. ಐಸನ್ ಪಾಲನ್ನ ರವರು “ಸಹಕಾರಿ ಬ್ಯಾಂಕುಗಳ ಕಾನೂನು ಹಾಗೂ ಬ್ಯಾಂಕಿಂಗ್ ರೆಗ್ಯುಲೇಶನ್ ಆ್ಯಕ್ಟ್” ಮಾಹಿತಿ ನೀಡಿದರು.
ಸಿ.ಎಸ್.ಐ ಶಿಕ್ಷಕಿ ಪ್ರಸನ್ನಿ ಸ್ವಾಗತಿಸಿದರು, ನ್ಯಾಯಾಂಗ ಇಲಾಖೆಯ ಅಕ್ಬರ್ ಕಾರ್ಯಕ್ರಮ ನಿರೂಪಿಸಿದರು, ವಕೀಲರಾದ ಮಹಮ್ಮದ್ ಖಲೀಲ್ ಧನ್ಯವಾದ ಅರ್ಪಿಸಿದರು.
Kshetra Samachara
06/08/2022 04:09 pm