ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾವೂರು: ಕೆರೆ "ಸ್ಮಾರ್ಟ್" ಕಾಮಗಾರಿಯಿಂದ ಸಂಕಷ್ಟ!

ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ವರ್ಷಗಳ ಇತಿಹಾಸ ಹೊಂದಿರುವ ಕಾವೂರಿನ ದೊಡ್ಡ ಕೆರೆ ಅಭಿವೃದ್ಧಿ ಹೆಸರಲ್ಲಿ ಮಾಯವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಸಣ್ಣ ನೀರಾವರಿ ಇಲಾಖೆ, ಕೃಷ್ಣ ಜೆ. ಪಾಲೇಮಾರ್‌ ಸಚಿವರಾಗಿದ್ದ ಸಂದರ್ಭದಲ್ಲಿ ರೂಪಾಯಿ 1.30 ಕೋಟಿ ವ್ಯಯಿಸಿ ಕೆರೆಯ ಹೂಳು ತೆಗೆದು ಅಗಲೀಕರಣ ಮತ್ತು ಅಭಿವೃದ್ಧಿ ಕಾರ್ಯ ನಡೆಸಿತ್ತು.

ಮೊಯ್ದಿನ್ ಬಾವಾ ಸಚಿವರಾಗಿದ್ದಾಗ ರೂ.10 ಲಕ್ಷ ಖರ್ಚು ಮಾಡಿ ಕೆರೆಗೆ ದನಕರುಗಳು ಮತ್ತು ನಾಗರಿಕರು ಬೀಳದಂತೆ ತಡೆಯಲು ಬೇಲಿ ನಿರ್ಮಿಸಲಾಗಿತ್ತು. ಕೆರೆ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯುವಲ್ಲಿ ಸ್ಥಳೀಯರಾದ ಒಸ್ವಾಲ್ಡ್ ಡಿಸಿಲ್ವ ಅವರು ಅವಿರತ ಶ್ರಮಿಸಿದ್ದು ಕೆರೆಯ ಸುತ್ತ ಗಿಡಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಕೆರೆಯ ಪಕ್ಕದ ರಸ್ತೆಯಲ್ಲಿ ಸಾರ್ವಜನಿಕರಿಗೆ ದ್ವಿಚಕ್ರ, ಕಾರ್, ಜೀಪುಗಳ ಯಾವುದೇ ಸಮಸ್ಯೆ ಇರಲಿಲ್ಲ.

ಆದರೆ ಈಗ ಮಂಗಳೂರು ಸ್ಮಾರ್ಟ್ ಸಿಟಿ ಹೆಸರಲ್ಲಿ ರೂ.8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಇದಕ್ಕಾಗಿ ಅಕ್ಕಪಕ್ಕದ ನೂರಾರು ಮನೆಗಳನ್ನು ಸಂಪರ್ಕಿಸುವ ರಸ್ತೆಯನ್ನು ಮುಚ್ಚಿದ್ದು ಇದರಿಂದ ಸ್ಥಳೀಯರ ಓಡಾಟ, ವಾಯುವಿಹಾರಕ್ಕೆ ಸಮಸ್ಯೆ ಎದುರಾಗಿದೆ.

ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರದಿಂದ ಜನರಿಗೆ ತಮ್ಮ ಮನೆಗಳಿಗೆ, ತೋಟಕ್ಕೆ ಹೋಗಲು ಅನಾನುಕೂಲ ಎದುರಾಗಿದೆ. ಸ್ಮಾರ್ಟ್ ಸಿಟಿ ತನ್ನ ನಿಯಮಗಳನ್ನು ಜನರಿಗೆ ತಿಳಿಸದೇ ಏಕಾಏಕಿ ನಿರ್ಧಾರವನ್ನು ಕೈಗೊಂಡಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಾರ್ಟ್ ಸಿಟಿ ಹೆಸರಲ್ಲಿ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು ಈ ಕೂಡಲೇ ಜಿಲ್ಲಾಡಳಿತ, ಸಂಬಂಧಪಟ್ಟ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಅಧಿಕಾರಿಗಳು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾವೂರು ಕೆರೆ ಅಭಿವೃದ್ಧಿಗೆ ಮೀಸಲಿಟ್ಟ ಹಣ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಬಿ. ಎಸ್. ಚಂದ್ರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

04/08/2022 11:10 am

Cinque Terre

1.25 K

Cinque Terre

2

ಸಂಬಂಧಿತ ಸುದ್ದಿ