ಮುಲ್ಕಿ: ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲೆ ಅತೀ ಹೆಚ್ಚು ಶಾಖೆ ಹೊಂದಿದ್ದು ಕಳೆದ 155 ಕ್ಕೂ ಹೆಚ್ಚು ವರ್ಷದಿಂದ ಉತ್ತಮ ಸೇವೆ ನೀಡುತ್ತ ಬಂದಿದ್ದು ಇದೀಗ ಹೊಸ ಯೋಜನೆಗಳನ್ನು ಪರಿಚಯಿಸಿ ಜನರಿಗೆ ಹತ್ತಿರ ವಾಗುತ್ತಿದೆ ಎಂದು ಮಂಗಳೂರು ಪೂರ್ವ ವಿಭಾಗದ ಸಹಾಯಕ ಅಂಚೆ ಅರಕ್ಷಕ ಹರೀಶ್ ಸಿ. ಪಿ ಹೇಳಿದರು.
ಅವರು ಕಿನ್ನಿಗೋಳಿ ಅಂಚೆ ಕಛೇರಿಯಲ್ಲಿ ಮಂಗಳೂರು ಅಂಚೆ ವಲಯದ ಆಶ್ರಯದಲ್ಲಿ ಅಂಚೆ ಮಾಹಿತಿ ಕಾರ್ಯಗಾರದಲ್ಲಿ ಮಾಹಿತಿ ನೀಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಹೊಸ ಬ್ಯಾಂಕಿಂಗ್ ಸೇವೆಯನ್ನು ಪರಿಚಿಸುವ ಜೊತೆಗೆ ಗ್ರಾಮೀಣ ಜನರಿಗೆ ವರದಾನ ವಾಗುವ ಗ್ರಾಮೀಣ ಅಂಚೆ ಜೀವ ವಿಮೆ ಹಾಗೂ ಹೆಣ್ಣು ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ವಿಮಾ ಯೋಜನೆಗಳು ಉತ್ತಮ ಕೆಲಸ ಮಾಡುತ್ತಿದೆ ಅಂಚೆ ನೌಕರರರು ಇನ್ನಷ್ಟು ಯೋಜನೆಗಳನ್ನು ಜನರಿಗೆ ತಲುಪಿಸ ಆಂಚೆ ಯೋಜನೆಗಳನ್ನು ಜನರಿಗೆ ಪರಿಚಯಿಸಿ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು
ಕಿನ್ನಿಗೋಳಿ ಅಂಚೆಕಚೇರಿಯ ಅಂಚೆ ಪಾಲಕ ಶ್ರೀಧರ್ ಪ್ರಸ್ತಾವೆನಗೈದು ಗ್ರಾಮೀಣ ಅಂಚೆ ಕಛೇರಿಗಳು ಉತ್ತಮ ಸಾಧನೆ ಮಾಡುತ್ತಿದೆ ಎಂದರು.
ಗ್ರಾಹಕರಾದ ಎಡ್ವಿನ್ ಡಿಸೋಜ, ರೋಹನ್ ಕಾರ್ಡೋಜಾ , ಗಣೇಶ್ ರಾವ್, ಸುರೇಶ್ ಪದ್ಮನೂರು , ಅಂಚೆ ಮೇಲ್ವಿಚಾರಕ ವಿನಯ್ , ಕಿನ್ನಿಗೋಳಿ ಅಂಚೆ ಕಚೇರಿಯ ಪದ್ಮಜಾ , ಶೋಭಾ ರಾಜೇಶ್ , ಕಾವ್ಯ ಶ್ರೀ , ರಾಮಚಂದ್ರ ಕಾಮತ್, ರವೀಂದ್ರ ,ಶಿಲ್ಪಾ ಸಲೋನಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/07/2022 06:42 pm