ಕಟೀಲು :ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥi ದರ್ಜೆ ಕಾಲೇಜಿನಲ್ಲಿ ಮಾನವಿಕ ಸಂಘ ವತಿಯಿಂದ ನಿವೃತ್ತ ಉಪನ್ಯಾಸಕ ಡಾ.ಪಿ.ಅನಂತಕೃಷ್ಣ ಭಟ್ ಇವರಿಂದ ‘ಭಾರತ ಸಂವಿಧಾನ’ ಕುರಿತು ಉಪನ್ಯಾಸ ನಡೆಯಿತು.
ರಾಷ್ಟ್ರದ ಭವಿಷ್ಯ ಯುವ ಜನಾಂಗದಲ್ಲಿದೆ. ಸಂವಿಧಾನ, ಭಾರತದ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಸ್ವಾತಂತ್ರ್ಯದ ಪ್ರಾಮುಖ್ಯ ಅರ್ಥ ಆಗುವುದು ಅದು ಇಲ್ಲದಾಗ. ಹಾಗಾಗಿ ದೇಶದ ಸ್ವಾತಂತ್ರ್ಯ ಹೋರಾಟ ಆಮೇಲಿನ ಸಂವಿಧಾನದ ರಚನೆ, ಈ ಹಿನ್ನಲೆಯಲ್ಲಿ ಕೆಲಸ ಮಾಡಿದ ಶ್ರೇಷ್ಟರ ಬಗ್ಗೆಯೂ ಅರಿತುಕೊಳ್ಳಬೇಕಾಗಿದೆ ಎಂದು ಅನಂತಕೃಷ್ಣ ಭಟ್ ಹೇಳಿದರು.
ಪ್ರಜಾಪ್ರಭುತ್ವದ ಯಶಸ್ಸಿಗೆ ಸಂವಿಧಾನದ ಅರಿವು ಎಲ್ಲರಿಗೂ ಮುಖ್ಯ ಎಂದು ತಿಳಿಸಿದರು.ಪ್ರಾಂಶುಪಾಲರಾದ ಡಾ.ಕೃಷ್ಣ, ದೇವಳದ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ, ದೇವಳದ ವಿಶೇಷಾಧಿಕಾರಿ ಮೋಹನ್ ರಾವ್, ಕುಮಾರಿ ಶ್ರುತಿ ಹಾಗೂ ಕುಮಾರಿ ಶ್ರುತಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಂಯೋಜಕರಾದ ಶ್ರೀಮತಿ ವನಿತಾ ಸ್ವಾಗತಿಸಿದರು. ಕುಮಾರಿ ಸೌಮ್ಯ ವಂದಿಸಿದರು. ಶರಣ್ ಡಿ.ಬಂಗೇರ ಕಾರ್ಯಕ್ರಮ ನಿರೂಪಿಸಿದರು.
Kshetra Samachara
25/07/2022 04:50 pm