ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಹು ಮಹಡಿ ಕಟ್ಟಡದ ಅವೈಜ್ಞಾನಿಕ ಕಾಮಗಾರಿ; ರಸ್ತೆ ಅವ್ಯವಸ್ಥೆ: ಸ್ಥಳೀಯರಿಗೆ ತೊಂದರೆ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕ್ಷೀರಸಾಗರ ಟಯರ್ ಅಂಗಡಿ ಬಳಿ ಬಹು ಮಹಡಿ ಕಟ್ಟಡದ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದ್ದು ಸ್ಥಳೀಯರು ಹೈರಾಣಾಗಿದ್ದಾರೆ.

ಕಟ್ಟಡ ಕಾಮಗಾರಿಯ ಮರಳು ಸಹಿತ ಇತರೆ ಸಾಮಗ್ರಿಗಳು ಸಾರ್ವಜನಿಕ ರಸ್ತೆಯಲ್ಲಿ ಹರಡಿಕೊಂಡಿದ್ದು ಸಂಚಾರ ದುಸ್ತರವಾಗಿದೆ.

ಕಟ್ಟಡದ ಕಾಮಗಾರಿ ಕೂಡ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ಮುಲ್ಕಿ ನಗರ ಪಂಚಾಯತಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್ ತಿಳಿಸಿದ್ದಾರೆ.

ಕಳೆದ ತಿಂಗಳುಗಳ ಹಿಂದೆ ಕಟ್ಟಡದ ಕಾನೂನು ಬಾಹಿರ ಕಾಮಗಾರಿಯನ್ನು ಪ್ರಶ್ನಿಸಿ ಸ್ಥಳೀಯರು ಮುಲ್ಕಿ ನ ಪಂಗೆ ದೂರು ನೀಡಿದ್ದು ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಕ್ರಮವನ್ನು ಸಕ್ರಮಗೊಳಿಸುವಂತೆ ಕಟ್ಟಡ ಮಾಲೀಕರಿಗೆ ಸೂಚನೆ ನೀಡಿದ್ದರು.

ಆದರೆ ಮತ್ತೆ ಅವೈಜ್ಞಾನಿಕ ಕಾಮಗಾರಿ ನಡೆದಿದ್ದು ಮುಲ್ಕಿ ನಗರ ಪಂಚಾಯತಿಗೆ ದೂರು ನೀಡುವುದಾಗಿ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

22/07/2022 10:27 am

Cinque Terre

1.09 K

Cinque Terre

0

ಸಂಬಂಧಿತ ಸುದ್ದಿ