ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:"ಜನಜಾಗೃತಿ ಮೂಲಕ ಗ್ರಾಮೀಣ ಅಧ್ಯಯನ ಶಿಬಿರ ಯಶಸ್ವಿಯಾಗಲಿ"

ಮುಲ್ಕಿ:ಮುಲ್ಕಿ ನಗರ ಪಂಚಾಯತ್ ಹಾಗೂ ಮಂಗಳೂರು ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ವತಿಯಿಂದ 2022 ನೇ ಸಾಲಿನ ಗ್ರಾಮೀಣ ಅಧ್ಯಯನ ಶಿಬಿರ ನಡೆಯಿತು.

ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಸ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನ. ಪಂ.ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ ಮುಲ್ಕಿ ಪರಿಸರದಲ್ಲಿ ಶಿಬಿರದ ಮೂಲಕ ಸಮಾಜಮುಖಿಯಾಗಿ ಗ್ರಾಮೀಣ ಜನರ ಬದುಕು ಅಧ್ಯಯನ ಮಾಡುವ ಕಾರ್ಯ ಯಶಸ್ವಿಯಾಗಲಿ ಎಂದರು.

ಮಂಗಳೂರು ಶೀದೇವಿ ಎಜುಕೇಷನಲ್ ಟ್ರಸ್ಟ್ ನ ಮುಖ್ಯಸ್ಥೆ ಮೈನಾ ಎಸ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ನ ಪಂ ಸದಸ್ಯರಾದ ಪುತ್ತುಬಾವ, ಯೋಗೀಶ್ ಕೋಟ್ಯಾನ್, ಹರ್ಷರಾಜ್ ಶೆಟ್ಟಿ ಸಂತೋಷ್ ಉಪಸ್ಥಿತರಿದ್ದರು.

ಟ್ರಸ್ಟ್ ನ ಸಮಾಜಕಾರ್ಯ ವಿಭಾಗದ ಪ್ರಾಂಶುಪಾಲರಾದ ಅಬಿತಾ ಎಸ್ ಪ್ರಾಸ್ತಾವಿಕ ಮಾತಾನಾಡಿದರು, ವಿದ್ಯಾರ್ಥಿನಿ ಅನುಗ್ರೇಟ್ ಸ್ವಾಗತಿಸಿದರು, ಉಪನ್ಯಾಸಕಿ ಆಶ್ವಿನಿ ಆರ್ ಕರ್ಕೇರಾ ಧನ್ಯವಾದ ಅರ್ಪಿಸಿದರು.

ಟ್ರಸ್ಟ್ ವತಿಯಿಂದ ಮುಲ್ಕಿ ನಗರ ಪಂಚಾಯತಿ ವಿವಿಧ ಕಡೆಗಳಲ್ಲಿ ಜನಜಾಗೃತಿ ಮೂಲಕ ಮೂರು ದಿನಗಳ ಕಾಲ ಗ್ರಾಮೀಣ ಅಧ್ಯಯನ ಶಿಬಿರ ನಡೆಯಲಿದೆ.

Edited By : PublicNext Desk
Kshetra Samachara

Kshetra Samachara

20/07/2022 05:49 pm

Cinque Terre

1.34 K

Cinque Terre

0

ಸಂಬಂಧಿತ ಸುದ್ದಿ