ಕಟೀಲು: ಆಧುನಿಕತೆಯ ಕಾಲಘಟ್ಟದಲ್ಲಿ ಭಾರತೀಯ ಜೀವನ ಮೌಲ್ಯವನ್ನು ನೀಡುವ ಶಿಕ್ಷಣದ ಅಗತ್ಯವಿದೆ ಎಂದು ಮಂಗಳೂರು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ. ಬಿ. ಪುರಾಣಿಕ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಅಭಿನಂದನೆ, ವಿವಿಧ ಸಂಘಗಳ ಉದ್ಘಾಟನೆ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ವಿದ್ಯೆ ಎಂದರೆ ಸರ್ಟಿಫೀಕೇಟ್ , ಅಂಕ ಪಡೆಯುದಲ್ಲ ನಮ್ಮ ಶಿಕ್ಷಣದಲ್ಲಿ ಸ್ಪಷ್ಟ ಗುರಿ ಹಾಗೂ ಸಾಧನೆ ಇರಬೇಕು ಜೊತೆಗೆ ಮಾನವೀಯ ಮೌಲ್ಯಯು ಇರಬೇಕು ಇದರಿಂದ ವಿದ್ಯಾರ್ಥಿ ಬೆಳೆಯಬಲ್ಲ, ಕಟೀಲು ಶಿಕ್ಷಣ ಸಂಸ್ಥೆಗಳು ಉಭಯ ಜಿಲ್ಲೆಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು, ಅನುದಾನ ಇಲ್ಲದೆ ಕಟೀಲು ದೇವಿ ಅನುಗ್ರಹದಿಂದ ನಡೆಯುತ್ತಿದೆ ಎಂದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಸಾಯೀಶ್ ಚೌಟ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಾನು ಕಲಿತ ಶಾಲೆ ಹಾಗೂ ಶಿಕ್ಷಕರ ಬಗ್ಗೆ ಗೌರವ ಅಭಿಮಾನ ಬೆಳಸಿಕೊಳ್ಲಬೇಕು ಎಂದರು.
ಶ್ರೀ ಕ್ಷೇತ್ರ ಕಟೀಲಿನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಅನುವಂಶಿಕ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು.
ಕಾಲೇಜಿನ ಸಂಚಾಲಕ , ಮೊಕ್ತೇಸರ ಅರ್ಚಕ ಕೆ. ವಾಸುದೇವ ಆಸ್ರಣ್ಣ , ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಶುಭ ಹಾರೈಸಿದರು.
ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರು ಗುತ್ತು , ಹಿರಿಯ ವಿದ್ಯಾರ್ಥಿ ಹಾಗೂಕರ್ಣಾಟಕ ಬಂದರು ಶಾಖೆಯ ಪ್ರಬಂಧಕ ಯುವರಾಜ್ ಶೆಟ್ಟಿ ಕೊಡೆತ್ತೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲ್ಯಾನ್ ಮತ್ತಿತರು ಉಪಸ್ಥಿರಿದ್ದರು.
ಇದೇ ಸಂದರ್ಭದಲ್ಲಿ ರ್‍ಯಾಂಕ್ ಪಡೆದ ಸ್ವಾತಿ ಶೆಟ್ಟಿ , ಶೋಭಿತಾ ಭಟ್, ಧನ್ಯ ಶ್ರೀ ಅವರನ್ನು ಹಾಗೂ 60 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಪನ್ಯಾಸಕ ವಾದಿರಾಜ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಾಲಾ ಪ್ರಾಚಾರ್‍ಯೆ ಕುಸುಮಾವತಿ ಸ್ವಾಗತಿಸಿದರು. ಪುಂಡಲೀಕ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಯಕ್ಷಗಾನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Kshetra Samachara
17/07/2022 04:32 pm