ಮುಲ್ಕಿ: ಕಿನ್ನಿಗೋಳಿಯ ರಾಜರತ್ನಪುರ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ, ಭ್ರಾಮರಿ ಮಹಿಳಾ ಸಮಾಜ ಮೆನ್ನಬೆಟ್ಟು-ಕಿನ್ನಿಗೋಳಿ, ಆದರ್ಶ ಬಳಗ ಕೊಡೆತ್ತೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,ಜೈ ತುಲುನಾಡ್ ನ ಆಶ್ರಯದಲ್ಲಿ ತುಳು ಲಿಪಿ ಕಲ್ಪುಗ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಿನ್ನಿಗೋಳಿಯ ರಾಜರತ್ನಪುರದ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ವಹಿಸಿ ಮಾತನಾಡಿ, ತುಳು ಕಲಿಕೆಗೆ ಯುವ ಜನಾಂಗ ಪ್ರೋತ್ಸಾಹ ಅಭಿನಂದನೀಯ ಎಂದರು.
ಜಿ ಪಂ ಮಾಜೀ ಉಪಾಧ್ಯಕ್ಷೆ ಕಸ್ತೂರಿ ಪಂಜ,ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ್ ಕಟೀಲು,ಮೂಲ್ಕಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂಜೂರು,ಜೈ ತುಲುನಾಡ್‌ದ ಮಾಜೀ ಅಧ್ಯಕ್ಷ ಸುದರ್ಶನ್ ಸುರತ್ಕಲ್,ಅಧ್ಯಕ್ಷ ವಿಶು ಕರ್ಕೇರ,ಭ್ರಾಮರಿ ಮಹಿಳಾ ಸಮಾಜ ಮೆನ್ನಬೆಟ್ಟು-ಕಿನ್ನಿಗೋಳಿಯ ಅಧ್ಯಕ್ಷೆ ಅನುಷಾ ಕರ್ಕೇರ,ಆದರ್ಶ ಬಳಗ ಕೊಡೆತ್ತೂರುನ ಅಧ್ಯಕ್ಷ ನಾಗರಾಜ್ ಶೆಟ್ಟಿ ಕೊಡೆತ್ತೂರು, ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು
Kshetra Samachara
17/07/2022 04:07 pm