ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿ, ಎಳತ್ತೂರು ಗ್ರಾಮಗಳಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಭೇಟಿ ನೀಡಿ ಮಳೆ ಹಾನಿಯನ್ನು ಪರಿಶೀಲನೆ ಮಾಡಿ ಅಧಿಕಾರಿಗಳಿಗೆತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಳತ್ತೂರು ಸಮೀಪದ ಕಲ್ಕರೆ ಲಿಲ್ಲಿ ಪಿರೇರಾ ರವರ ಮನೆಯ ಹಿಂಬಾಗದ ತೊರೆಯ ತಡೆಗೋಡೆ ಕುಸಿದಿದ್ದು ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂತರ ಶಿಮಂತೂರು ದೇವಸ್ಥಾನದ ಸಮೀಪದಲ್ಲಿನ ರಸ್ತೆ ಬದಿಯ ತಡೆಗೋಡೆ ಮತ್ತಿತರ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ.
Kshetra Samachara
13/07/2022 03:42 pm