ಸುರತ್ಕಲ್: ಮಂಗಳೂರು ನಗರ ಉತ್ತರ ಕ್ಷೇತ್ರದ ಹೊಸಬೆಟ್ಟು ವಾರ್ಡ್, ಸುರತ್ಕಲ್ ಗುಡ್ಡೆಕೊಪ್ಲ, ಎನ್ಐಟಿಕೆ ಬೀಚ್ ರಸ್ತೆ, ಬೈಕಂಪಾಡಿ ಮೀನಕಳಿಯ ಪ್ರದೇಶಗಳಿಗೆ ಶಾಸಕರಾದ ಡಾ.ಭರತ್ ಶೆಟ್ಟಿಯವರು ಭೇಟಿ ನೀಡಿ ಅತಿವೃಷ್ಟಿಯಿಂದಾದ ಪ್ರಕೃತಿ ವಿಕೋಪದ ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರೊಂದಿಗೆ ಪರಿಹಾರೋಪಾಯದ ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಮಳೆಹಾನಿಯಿಂದ ಜನರಿಗೆ ಆಗಿರುವ ನಷ್ಟಕ್ಕೆ ತಕ್ಷಣ ಗರಿಷ್ಟ ಪರಿಹಾರ ಧನವನ್ನು ಒದಗಿಸಲು ಮಾಡಬೇಕಾದ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮನಪಾ ಸದಸ್ಯರುಗಳಾದ ಸುಮಿತ್ರಾ ಕರಿಯ, ಸುನೀತಾ ಸಾಲಿಯಾನ್, ರಾಜೇಶ್ ಬೈಕಂಪಾಡಿ, ಶ್ವೇತಾ ಪೂಜಾರಿ, ನಯನ ಕೋಟ್ಯಾನ್, ಸ್ಥಳೀಯ ಮುಖಂಡರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
11/07/2022 06:00 pm