ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಕುಂಜೆ:ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಭೇಟಿ; ಪರಿಹಾರಕ್ಕೆ ಸೂಚನೆ

ಮುಲ್ಕಿ: ನೆರೆ ಪೀಡಿತ ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಕುಂಜೆ ಗುತ್ತು ಮಾಗಂದಡಿ, ಗುತ್ತು, ಮುಗೇರ ಬೈಲು, ಕರ್ನೀರೆ ಪ್ರದೇಶಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿದರು.

ಸುಮಾರು 200 ಎಕ್ಕರೆ ಭತ್ತದ ನಾಟಿ ಮತ್ತು ಕಬ್ಬು ಬೆಳೆ ನೀರಿನಲ್ಲಿ ಮುಳುಗಡೆಯಾಗಿದ್ದು, ಬೇಳೆ ಹಾನಿಯ ಬಗ್ಗೆ ರೈತರು ಶಾಸಕರ ಮತ್ತು ಅಧಿಕಾರಿಗಳ ಗಮನ ಸೆಳೆದರು, ಕರ್ನೀರೆ ಯಲ್ಲಿ ಮೂರು ವರ್ಷದ ಹಿಂದೆ ಹೊಸ ಅಣೆಕಟ್ಟು ನಿರ್ಮಾಣವಾಗಿದ್ದು, ಈ ಹಿಂದೆ ಇದ್ದ ಹಳೆಯ ಅಣೆಕಟ್ಟು ತೆರವಿಗೊಳಿಸದ ಕಾರಣ ಮರದ ದಿಮ್ಮಿ ಮತ್ತು ಕಸ ಕಡಿಗಳು ಬಂದು ಸೇರಿ ನೀರು ಸರಗಾವಾಗಿ ಹರಿದು ಹೋಗಲು ಸಾಧ್ಯವಾಗದೆ ಕೃಷಿ ಪ್ರದೇಶಗಳು ಜಲಾವೃತಗೊಂಡು ಸಮಸ್ಯೆಯಾಗುತ್ತಿದೆ ಅದಷ್ಟು ಬೇಗ ಸರಿಪಡಿಸಬೇಕು, ಹಳೆಯ ಅಣೆಕಟ್ಟು ತೆರವುಗೊಳಿಸಬೇಕು ಎಂದು ಮಾಜೀ ಅಧ್ಯಕ್ಷ ದಿನೇಶ್ ಪುತ್ರನ್ ಶಾಸಕರ ಗಮನ ಸೆಳೆದರು.

ಈ ಬಗ್ಗೆ ಶಾಸಕರು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು, ಕೃಷಿ ನಾಶಕ್ಕೆ ಪರಿಹಾರ ನೀಡುವುದಾಗಿ ಶಾಸಕರು ಭರವಸೆ ನೀಡಿದರು ಈ ಸಂದರ್ಭ ಬಳ್ಕುಂಜೆ ಪಂಚಾಯತ್ ಅಧ್ಯಕ್ಷೆ ಮಮತಾ ಪೂಂಜ, ಉಪಾಧ್ಯಕ್ಷ ಆನಂದ ಕೊಲ್ಲೂರು, ತಹಶಿಲ್ದಾರ ಗುರುಪ್ರಸಾದ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

11/07/2022 05:14 pm

Cinque Terre

1.93 K

Cinque Terre

0

ಸಂಬಂಧಿತ ಸುದ್ದಿ