ಕಾಸರಗೋಡು:ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಪ್ರದೇಶವಾದ ಕಾಸರಗೋಡು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ಜನ ಜೀವನ ಅಸ್ತ ವ್ಯಸ್ತಗೊಂಡಿದೆ.
ಭಾರಿ ಮಳೆಗೆ ಹಲವೆಡೆ ನೆರೆ ಉಂಟಾಗಿದ್ದು ಜಿಲ್ಲೆಯ ಪ್ರಸಿದ್ಧ ಸ್ಥಳವಾದ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನಕ್ಕೆ ನೆರೆ ನೀರು ನುಗ್ಗಿದೆ.
ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ಮಧುವಾಹಿನಿ ನದಿಯ ನೀರು ದೇವಸ್ಥಾನದೊಳಗೆ ಏಕಾಏಕಿ ಬಂದಿದ್ದರಿಂದ ಕೆಲಕಾಲ ಪೂಜಾ ಚಟುವಟಿಕೆಗಳಿಗೆ ತೊಂದರೆಯಾಯಿತು.
ಜಿಲ್ಲೆಯ ಕುಂಬಳೆ, ಪೆರ್ಲ, ಬದಿಯಡ್ಕ, ಹೊಸಂಗಡಿ, ಉಪ್ಪಳ, ಬೋವಿಕ್ಕಾನ,ನಾಯಮ್ಮಾರಮೂಲೆ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಸಣ್ಣಪುಟ್ಟ ಹಾನಿ ಸಂಭವಿಸಿದೆ.
Kshetra Samachara
11/07/2022 09:49 am