ಮುಲ್ಕಿ: ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಹಳೆಯಂಗಡಿ ಪರಿಸರದಲ್ಲಿ ಬೀಸಿದ ಬಾರಿ ಮಳೆ ಗಾಳಿಗೆ ಅಪಾರ ಹಾನಿ ಸಂಭವಿಸಿದೆ.
ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಕೊಳುವೈಲು ಪಡುಹಿತ್ಲು ಬಳಿ ಬೀಸಿದ ಭಾರೀ ಗಾಳಿಗೆ ಮರ ಬಿದ್ದು ಹತ್ತು ವಿದ್ಯುತ್ ಕಂಬಗಳು ದರಶಾಹಿಯಾಗಿದೆ. ಸ್ಥಳಕ್ಕೆ ಪಂಚಾಯತ್ ಸದಸ್ಯ ಸತೀಶ್ ಕೋಟ್ಯಾನ್, ಮೆಸ್ಕಾಂ ಅಧಿಕಾರಿಗಳು ಧಾವಿಸಿದ್ದು ಮರವನ್ನು ತೆರವುಗೊಳಿಸಿದ್ದಾರೆ. ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದರಿಂದ ಮೆಸ್ಕಾಂಗೆ ಬಾರೀ ನಷ್ಟ ಉಂಟಾಗಿದೆ.
ಹಳೆಯಂಗಡಿ ಕೊಳುವೈಲು ಪರಿಸರದಲ್ಲಿ ನಂದಿನಿ ನದಿಯ ನೀರಿನ ಮಟ್ಟ ಏರುತ್ತಿದ್ದು ನೆರೆ ಭೀತಿ ಎದುರಾಗಿದೆ.ಗ್ರಾಪಂ ವ್ಯಾಪ್ತಿಯ ಕೊಪ್ಪಲ ನದಿ ತೀರದಲ್ಲಿ ವಾಸವಾಗಿದ್ದ ನಾಲ್ಕು ಕುಟುಂಬಗಳನ್ನು ಗ್ರಾಪಂ ಸದಸ್ಯರಾದ ಅಬ್ದುಲ್ ಅಜೀಜ್, ವಿನೋದ್ ಕುಮಾರ್, ಪದ್ಮಾವತಿ ಶೆಟ್ಟಿ, ವಿ ಎ ಮೋಹನ್ ನೇತೃತ್ವದಲ್ಲಿ ಸ್ಥಳಾಂತರಿಸಲಾಗಿದೆ. ಉಳಿದಂತೆ ಪಂಚಾಯತ್ ವ್ಯಾಪ್ತಿಯ ಪಾವಂಜೆ ಪರಿಸರದಲ್ಲಿ ನೆರೆ ಉಂಟಾಗಿದೆ.
Kshetra Samachara
10/07/2022 07:38 pm