ಮುಲ್ಕಿ: ಹಳೆಯಂಗಡಿ ಸಮೀಪದ ಕೆಮ್ರಾಲ್ ಗ್ರಾ ಪಂ ವ್ಯಾಪ್ತಿಯ ಬೊಳ್ಳೂರು ಬಳಿ ತಡೆಗೋಡೆಯಾಗಿ ನಿರ್ಮಿಸಿದ ಸ್ಲಾಬ್ ಪಕ್ಕದ ಮನೆ ಮೇಲೆ ಕುಸಿದು ಬಿದ್ದು ಅವಘಡ ಸಂಭವಿಸಿದೆ.
ಶನಿವಾರ ರಾತ್ರಿ ನಿರಂತರ ಸುರಿದ ಭಾರೀ ಮಳೆಗೆ ಸ್ಥಳೀಯ ನಿವಾಸಿ ಪ್ರಕಾಶ್ ಎಂಬುವವರ ಮನೆಯ ಹಿಂದಿನ ಭಾಗದಲ್ಲಿ ತಡೆಗೋಡೆಯಾಗಿ ನಿರ್ಮಿಸಿದ ಸುಮಾರು 20 ಪೀಟು ಅಗಲ 10 ಪೀಟು ಎತ್ತರದ ಸ್ಲಾಬ್ ಕುಸಿದು ಕೆಳ ಭಾಗದಲ್ಲಿನ ಪಕ್ಕದ ಉಮರಬ್ಬ ಎಂಬವರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಗೆ ಭಾಗಶ ಹಾನಿಯಾಗಿದೆ.
ರಾತ್ರಿ ಸುಮಾರು 3:00 ಗಂಟೆಯ ಹೊತ್ತಿಗೆ ಘಟನೆ ಸಂಭವಿಸಿದ್ದು ಆತಂಕಗೊಂಡ ಉಮರಬ್ಬ ಕುಟುಂಬ, ತಕ್ಷಣ ಸ್ಥಳಿಯರಿಗೆ ಮಾಹಿತಿ ನೀಡಿದ್ದು ಸ್ಥಳೀಯ ಸಂಘಟನೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸಹಾಯದಿಂದ ರಾತ್ರೋರಾತ್ರಿ ಮನೆಯವರನ್ನು ಸ್ಥಳಾಂತರಿಸಲಾಗಿದೆ
ಬೆಳಿಗ್ಗೆ ಕೆಮ್ರಾಲ್ ಗ್ರಾಫಂ ಸದಸ್ಯ ನಾಗೇಶ್ ಬೊಳ್ಳೂರು ಅಬ್ದುಲ್ ಅಝೀಝ್, ಎಮ್.ಎಂ. ಖಾದರ್, ವಿಎ ಮೋಹನ್ ಸಾಮಾಜಿಕ ಕಾರ್ಯಕರ್ತರಾದ ಅದ್ದಿ ಬೊಳ್ಳೂರು, ಮುಮ್ತಾಜ್ ಅಲಿ ಹಾರಿಸ್ ನವರಂಗ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಉಮರಬ್ಬ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದಾರೆ.
Kshetra Samachara
10/07/2022 04:16 pm