ಕಟೀಲು: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಕಟೀಲಿನಲ್ಲಿ ನಂದಿನಿ ನದಿ ಉಕ್ಕಿ ಹರಿದಿದ್ದುಕಟೀಲು ಜಲಕದಕಟ್ಟೆ ಬಳಿ ಕಿರು ಸೇತುವೆ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಟೀಲು ಜಲಕದಕಟ್ಟೆ ಬಳಿ ಸಂಪರ್ಕ ಕಲ್ಪಿಸುವ ಬಡಗ ಎಕ್ಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಕ್ಕುಂಡೇಲು, ಮಚ್ಚಾರು ಪ್ರದೇಶದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಕಿರು ಸೇತುವೆ ಅವಲಂಬಿಸಿದ್ದು ನೆರೆ ನೀರಿನಿಂದಾಗಿ ಕಂಗಾಲಾಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಭಾರೀ ಮಳೆಗೆ ನಂದಿನಿ ನದಿಯ ನೆರೆ ನೀರು ಉಕ್ಕಿ ತೋಟಕ್ಕೆ ಹರಿದು ಕೃಷಿ ನಾಶ ಸಂಭವಿಸಿದೆ.
Kshetra Samachara
10/07/2022 03:35 pm