ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:"ಪಾರದರ್ಶಕ ಸೇವೆ ನೀಡುವ ಅಧಿಕಾರಿಗಳು ಸದಾ ಜನ ಮಾನಸದಲ್ಲಿರುತ್ತಾರೆ": ರಂಗನಾಥ ಶೆಟ್ಟಿ

ಮುಲ್ಕಿ: ಸಂಸ್ಥೆಯನ್ನು ಮನೆಯಂತೆ ಪ್ರೀತಿಸಿ ಪ್ರಾಮಾಣಿಕವಾಗಿ ಪಾರದರ್ಶಕ ಸೇವೆ ನೀಡುವ ಅಧಿಕಾರಿಗಳು ಸದಾ ಜನ ಮಾನಸದಲ್ಲಿ ಸ್ಥಿರವಾಗಿರುತ್ತಾರೆ ಎಂದು ಮುಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.

ಮುಲ್ಕಿಯ ಬ್ಯಾಂಕ್ ಅಫ್ ಬರೋಡಾ ಶಾಖೆಯಲ್ಲಿ ಶುಕ್ರವಾರ ಸಂಜೆ ಬ್ಯಾಂಕ್ ಅಫ್ ಬರೋಡಾ ಕಿನ್ನಿಗೋಳಿ ಶಾಖೆಗೆ ಪ್ರಭಂದಕರಾಗಿ ವರ್ಗಾವಣೆಗೊಂಡ ಮುಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಆಡಳಿತ ನಿರ್ದೇಶಕ ಜೇಸನ್ ಕ್ರಿಷ್ಟೋಫರ್ ಪುಟಾಡೋ ರವರನ್ನು ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭನೂತನ ಆಡಳಿತ ನಿರ್ದೇಶಕ ಶಿವರಾಮ ಶೆಟ್ಟಿಯವರನ್ನು ಸ್ವಾಗತಿಸಲಾಯಿತು. ಮುಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘ ನಿರ್ಗಮನ ಆಡಳಿತ ನಿರ್ದೇಶಕ ಜೇಸನ್ ಕ್ರಿಷ್ಟೋಫರ್ ಪುಟಾಡೋ ಮತ್ತು ಆಡಳಿತ ನಿರ್ದೇಶಕರಾಗಿ ಆಗಮಿಸಿದ ಶಿವರಾಮ ಶೆಟ್ಟಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭ ಬ್ಯಾಂಕ್ ಆಫ್ ಬರೋಡಾ ಕೇಂದ್ರ ಕಚೇರಿ ಅಧಿಕಾರಿಗಳಾದ ಜಶನ್ ದೀಪ್ ಸಿಂಗ್, ಕುಮಾರ್ ಗೌರವ್,ಮುಲ್ಕಿ ಶಾಖೆಯ ಪ್ರಭಂದಕ ಪ್ರಣಾಮ್ ಕುಮಾರ್, ಪ್ರಜ್ವಲ್ ಜೈನ್,ಸತೀಶ್ ಶೆಟ್ಟಿ,ಗಂಗಾಧರ ಶೆಟ್ಟಿ ಬರ್ಕೆತೋಟ,ಶಶಿ ಅಮೀನ್ ಅಭಿನಂದನಾ ಮಾತುಗಳನ್ನಾಡಿದರು. ಸಹಕಾರಿ ಸಂಘದ ನಿರ್ದೇಶಕರಾದ ನರಸಿಂಹ ಪೂಜಾರಿ ಕೊಯ್ಯಾರು, ನಂಜುಂಡ ಕೆ.ಎಸ್ ರಾವ್ ನಗರ, ರಾಮ ನಾಯ್ಕ್, ಅಶೋಕ್ ಕುಮಾರ್ ಚಿತ್ರಾಪು, ಗಂಗಾಧರ ಶೆಟ್ಟಿ ,ಪದ್ಮಿನಿ ಶೆಟ್ಟಿ, ಪುಷ್ಪಾ ಮಡಿವಾಳ್ತಿ,ದೇವಪ್ರಸಾದ್ ಉಪಸ್ಥಿತರಿದ್ದರು. ಪ್ರಭಂದಕ ಚಂದ್ರಕಾಂತ ಶೆಟ್ಟಿ ನಿರೂಪಿಸಿ ವಂದಿಸಿದರು.

Edited By : PublicNext Desk
Kshetra Samachara

Kshetra Samachara

08/07/2022 06:35 pm

Cinque Terre

2.92 K

Cinque Terre

0

ಸಂಬಂಧಿತ ಸುದ್ದಿ