ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಕಸದ ರಾಶಿಯಿಂದ ದುರ್ವಾಸನೆ!!

ಮುಲ್ಕಿ:ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದ್ರ ನಗರ ರೈಲ್ವೆ ಕ್ರಾಸಿಂಗ್ ಬಳಿ ಎಗ್ಗಿಲ್ಲದೆ ಕಸದ ರಾಶಿ ಮತ್ತಷ್ಟು ಜಾಸ್ತಿಯಾಗುತ್ತಿದ್ದು ಪಂಚಾಯತ್ ತೆರವುಗೊಳಿಸಲು ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದ್ರ ನಗರ ರೈಲ್ವೆ ಕ್ರಾಸಿಂಗ್ ಬಳಿ ಖಾಸಗಿ ಯವರ ಜಾಗದಲ್ಲಿ ಹಾಗೂ ರೈಲ್ವೆ ಜಾಗದಲ್ಲಿ ದುಷ್ಕರ್ಮಿಗಳು ತ್ಯಾಜ್ಯವನ್ನು ಬಿಸಾಡುತ್ತಿದ್ದು ಮಳೆ ನೀರಿಗೆ ತ್ಯಾಜ್ಯ ನೀರು ಹರಿದು ರೋಗದ ಭೀತಿ ಎದುರಾಗಿದೆ.

ಇಂದ್ರ ನಗರ ರೈಲ್ವೆ ಗೇಟ್ ಬಳಿ ರಸ್ತೆಯ ಚರಂಡಿಗೆ ಕೂಡ ತ್ಯಾಜ್ಯ ಬಿಸಾಡುತ್ತಿದ್ದು ಪರಿಸರ ದುರ್ವಾಸನೆ ಯುಕ್ತ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಅನೇಕ ಬಾರಿ ಪಂಚಾಯತಿಗೆ ಸ್ಥಳೀಯರು ದೂರು ನೀಡಿದರೂ ತ್ಯಾಜ್ಯ ಇನ್ನೂ ತೆರವುಗೊಂಡಿಲ್ಲ.

Edited By : PublicNext Desk
Kshetra Samachara

Kshetra Samachara

08/07/2022 06:08 pm

Cinque Terre

3.16 K

Cinque Terre

0

ಸಂಬಂಧಿತ ಸುದ್ದಿ