ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಮೀನು ಮಾರುಕಟ್ಟೆ ಬಳಿ ಭಾರೀ ಮಳೆಗೆ ಕೃತಕ ನೆರೆ ಉಂಟಾಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಚರಂಡಿಯ ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತಿದ್ದು ರೋಗಗಳ ಭೀತಿ ಎದುರಾಗಿದೆ.
ಕಾರ್ನಾಡ್ ಮೀನು ಮಾರುಕಟ್ಟೆಯ ಬಳಿಯ ಬಹು ಮಹಡಿ ಕಟ್ಟಡದ ಎದುರು ಭಾಗದಲ್ಲಿ ಮಳೆ ಗೆ ನೀರು ಹರಿಯದೆ ಬೃಹದಾಕಾರದ ಹೊಂಡ ಉಂಟಾಗಿ ಹೆದ್ದಾರಿ ಡಾಮರು ನಾಶದ ಭೀತಿ ಎದುರಾಗಿದೆ.
ರಾಜ್ಯ ಹೆದ್ದಾರಿಯಲ್ಲಿ ಅತೀ ವೇಗದಿಂದ ಸಾಗುವ ವಾಹನಗಳಿಂದ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿರುವವರ ಮೇಲೆ ಕೆಸರುನೀರು ಸಿಂಚನವಾಗುತ್ತಿದ್ದು ಪಾಡು ಹೇಳತೀರದಾಗಿದೆ. ಈ ಬಗ್ಗೆ ಅನೇಕ ಬಾರಿ ಲೋಕೋಪಯೋಗಿ ಇಲಾಖೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಎಂದು ಸ್ಥಳಿಯರು ಆಕೋಶ ವ್ಯಕ್ತಪಡಿಸಿದ್ದಾರೆ.
Kshetra Samachara
07/07/2022 07:10 pm