ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಬಳ್ಕುಂಜೆ ಭೂಸಂತ್ರಸ್ತರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

ಮಂಗಳೂರು:ಭೂ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಬಳ್ಕುಂಜೆ ಕೊಲ್ಲೂರು ಉಳೆಪಾಡಿ ನಿಯೋಗವು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಕೆ.ಐ.ಎ.ಡಿ.ಬಿ. ಅಧಿಕಾರಿಗಳು ಕೃಷಿಕರ ಮೇಲೆ ನಾನಾ ರೀತಿಯ ಒತ್ತಡ ಹಾಗೂ ಜನರಿಗೆ ಭೂಮಿ ನೀಡಲು ಬೆದರಿಸುತ್ತಿರುವ ವಿಚಾರವನ್ನು ತಿಳಿಸಿದರು.

ಕೃಷಿ ,ಹೈನುಗಾರಿಕೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಶಾಂಭವಿ ನದಿಗೆ ಆಗುವ ಬಾದಕಗಳ ಬಗ್ಗೆ ಸಂಸದರಿಗೆ ಮನವರಿಕೆ ಮಾಡಿದರು.

ಗ್ರಾಮಸ್ಥರ ಅಹವಾಲನ್ನು ಸಮಾಧಾನದಿಂದ ಆಲಿಸಿದ ಸಂಸದರು ಕೆ.ಐ.ಎ.ಬಿ.ಡಿ. ಅಧಿಕಾರಿಗಳಿಗೆ ಸಂತ್ರಸ್ತರಿಗೆ ಒತ್ತಡ ಬೆದರಿಕೆ ಹಾಕುವ ಕುರಿತು ವಿಚಾರಿಸಿ ತರಾಟೆಗೆ ತೆಗೆದುಕೊಂಡರು.

ಕೃಷಿಕರ ಸಭೆ ಕರೆದು ತಾವೇ ಖುದ್ದಾಗಿ ಅಭಿಪ್ರಾಯ ಪಡೆದು ನಿರ್ಧರಿಸುವವರೆಗೆ ಎಲ್ಲಾ ಪ್ರಕ್ರಿಯೆಗಳನ್ನು ತಡೆ ಹಿಡಿಯಬೇಕೆಂದು ಸೂಚಿಸಿದರು.ತಾವು ಕೈಗಾರಿಕೆಗಳ ಅಭಿವೃದ್ಧಿಯ ವಿರೋಧಿಯಲ್ಲ,ಆದರೆ ಕೃಷಿಕರಿಂದ ಇಚ್ಛೆಗೆ ವಿರುದ್ಧವಾಗಿ ಭೂಮಿ ಪಡೆದು ಕೊಳ್ಳುವುದನ್ನು ವಿರೋಧಿಸುವುದಾಗಿಯೂ ಗ್ರಾಮಸ್ಥರ ಕಳವಳವನ್ನು ಅರ್ಥ ಮಾಡಿಕೊಂಡು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ನಿಯೋಗದ ಜೊತೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಬಿಜೆಪಿ ನಾಯಕರಾದ ಕಸ್ತೂರಿ ಪಂಜ, ಈಶ್ವರ ಕಟೀಲ್ ಹಾಗೂ ಬಳ್ಕುಂಜೆ ,ಐಕಳ ಪಂಚಾಯತ್ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/07/2022 09:54 pm

Cinque Terre

2.68 K

Cinque Terre

1

ಸಂಬಂಧಿತ ಸುದ್ದಿ