ಬೆಂಗಳೂರು: ಸರಳ ವಾಸ್ತು ಮೂಲಕ ಜನ ಸೇವೆ ಮಾಡುತ್ತಿದ್ದ ಚಂದ್ರಶೇಖರ ಗುರೂಜಿ ಅವರ ಹತ್ಯೆ,ಅತ್ಯಂತ ದುಃಖ ದಾಯಕ ಮತ್ತು ಖಂಡನೀಯ. ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಣ, ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಗ್ರಹಿಸಿದ್ದಾರೆ.
ಯಾವುದೇ ರೀತಿಯ ಅಭಿಪ್ರಾಯ ಭೇದ ಇದ್ದರೆ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಸಾತ್ವಿಕ ರೀತಿಯಲ್ಲಿ ಬದುಕುವ ಮಂದಿಯನ್ನು ಕೊಲೆ ಮಾಡುವುದು ಅಕ್ಷಮ್ಯಅಪರಾಧ.ತನ್ನ ಸರಳ ವಾಸ್ತು ಮೂಲಕ ಸಾವಿರಾರು ಜನಕ್ಕೆ ಒಳ್ಳೆಯದು ಮಾಡಿರುವ ಚಂದ್ರಶೇಖರ ಗುರೂಜಿ ಯವರನ್ನು ಮೋಸದಿಂದ ಹತ್ಯೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿ ಸುವಂತೆ ಮಾಡಿದ ಪ್ರಕರಣ ವಾಗಿದೆ. ಪೋಲಿಸರು ತಕ್ಷಣ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಲಯ ಇಂತಹ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ನೀಡಬೇಕಾಗಿದೆ.
ಈ ಮೂಲಕ ಸಮಾಜಕ್ಕೆ ಧೈರ್ಯ ತುಂಬುವ ಕೆಲಸವಾಗಬೇಕಾಗಿದೆ ಎಂದು ಶ್ರೀ ಚಂದ್ರಶೇಖರ ಸ್ವಾಮೀಜಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Kshetra Samachara
05/07/2022 04:41 pm