ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡು ವಿಜಯ ರೈತ ಸೊಸೈಟಿ ಸಂಪರ್ಕಿಸುವ ರೈಲ್ವೆ ಮೇಲ್ಸೇತುವೆ ಹಾಗೂ ಬಾರ್ ಬಳಿ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಗಬ್ಬೆದ್ದು ಹೋಗಿದೆ.
ಜಿಲ್ಲಾ ಪಂಚಾಯತ್ ಅಧೀನದಲ್ಲಿರುವ ಈ ರಸ್ತೆಯ ಇಕ್ಕೆಲಗಳ ಚರಂಡಿ ಕಸಕಡ್ಡಿ, ಗಿಡಗಂಟಿಗಳಿಂದ ತುಂಬಿಹೋಗಿದ್ದು ರಸ್ತೆಯಲ್ಲಿ ಮಳೆ ನೀರಿನೊಡನೆ ಕೊಳಕು ನೀರು ಹರಿಯುತ್ತಿರುವುದರಿಂದ ಸಂಚಾರ ತ್ರಾಸದಾಯಕವಾಗಿ ಪರಿಣಮಿಸಿದ್ದು ಪಾದಾಚಾರಿಗಳಿಗೆ ಪುಕ್ಕಟೆ ಕೆಸರು ನೀರು ಸಿಂಚನವಾಗಿ ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾವಿರಾರು ಜನ ಓಡಾಟ ನಡೆಸುವ ಈ ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
Kshetra Samachara
02/07/2022 05:47 pm