ಮಂಗಳೂರು: ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಪರಿಶೀಲಿಸಲು ಶಾಸಕರಾದ ಡಾ.ಭರತ್ ಶೆಟ್ಟಿಯವರು ಶುಕ್ರವಾರ ಪಾಲಿಕೆ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ ಶಾಸಕರು ಮಳೆ ಹಾನಿಯಿಂದ ಜನಸಾಮಾನ್ಯರು ಅನುಭವಿಸಿದ ನಷ್ಟಕ್ಕೆ ಸರಕಾರದಿಂದ ಗರಿಷ್ಟ ಪರಿಹಾರ ಕೊಡಿಸಲು ಮಾಡಬೇಕಾದ ಕ್ರಮಗಳನ್ನು ತಕ್ಷಣ ಆರಂಭಿಸಲು ಸೂಚನೆ ನೀಡಿದರು.
ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಲು ಸದಾ ಸಿದ್ಧವಿದ್ದು, ಮಳೆಹಾನಿಯಿಂದ ನಾಗರಿಕರು ಅನುಭವಿಸಿದ ಹಾನಿಗೆ ಗರಿಷ್ಟ ಪರಿಹಾರ ಧನ ನೀಡಲು ಬದ್ಧವಾಗಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿಯವರು ತಿಳಿಸಿದ್ದಾರೆ.
ಶಾಸಕರೊಂದಿಗೆ ಉಪ ತಹಶೀಲ್ದಾರ್ ,ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಇನ್ನಿತರ ಸಿಬ್ಬಂದಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
01/07/2022 09:28 pm